ಮಲಯಾಳಂ ನಟ ಶರತ್ ಚಂದ್ರನ್ ಇನ್ನಿಲ್ಲ…

59
firstsuddi

ಮಲಯಾಳಂ ಚಿತ್ರರಂಗದ ಪ್ರತಿಭಾನ್ವಿತ ನಟ ಶರತ್ ಚಂದ್ರನ್ ಕೇವಲ 37ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಶರತ್ ನಿಧನದಿಂದ ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ.

ನಟ ಆ್ಯಂಟನಿ ಅವರು ಶರತ್ ನಿಧನದ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ. ಯುವ ನಟನ ನಿಧನಕ್ಕೆ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ನಟ ಶರತ್ ಚಂದ್ರನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಅವರು ಮೃತಪಟ್ಟಿದ್ದು ಇದುವರೆಗೂ ಸಾವಿಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ.

ಶರತ್ ಚಂದ್ರನ್ ಕೊಚ್ಚಿ ಮೂಲದವರು. ಮೊದಲು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶರತ್ ಚಂದ್ರನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಡಬ್ಬಿಂಗ್ ಆರ್ಟಿಸ್ಟ್ ಆಗಿ. ನಂತರ 2017ರಲ್ಲಿ ರಿಲೀಸ್ ಆಗಿದ್ದ ‘ಅಂಗಮಾಲಿ ಡೈರೀಸ್’ ಸಿನಿಮಾ ಶರತ್ ಚಂದ್ರನ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತು. ‘ಮೆಕ್ಸಿಕನ್ ಅಪರಾತ’ (2017), ‘ಸಿಐಎ: ಕಾಮ್ರೇಡ್ ಇನ್ ಅಮೆರಿಕ’ (2017), ‘ಕೂಡೆ’ (2018) ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.