ಜನಸಾಮಾನ್ಯರು ನ್ಯಾಯಬೆಲೆ ಅಂಗಡಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ- ಅಲ್ತಾಫ್ ಬಿಳಗುಳ…

697
firstsuddi

ಮೂಡಿಗೆರೆ -ಅನ್ನಭಾಗ್ಯ ಯೋಜನೆಯನ್ನು ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಷ್ಠಾನಕ್ಕೆ ತಂದಿದ್ದು,  ಅನ್ನಭಾಗ್ಯ ಯೋಜನೆಗೆ ರಾಜ್ಯಸರ್ಕಾರ ವಾರ್ಷಿಕ 4,600 ಕೋಟಿ ವೆಚ್ಚ ಮಾಡುತಿದ್ದು, ಆದರೆ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ರೇಷನ್ ಕಾರ್ಡ್ ಹೊಂದಿರುವವರಿಗೆ ಕೊಡುವ ದಿನಸಿ ಪದಾರ್ಥಗಳು ಹಾಗೂ ಅಕ್ಕಿ ಪಡೆಯಲು ಪ್ರತಿ ತಿಂಗಳು ಹೆಬ್ಬೆಟ್ಟಿನ ಗುರುತನ್ನು ನೀಡಿ ಪಡೆಯಬೇಕು. ಎಂಬ ನೀತಿ ಸರಿಯಲ್ಲ  ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕೂಲಿ ಕೆಲಸ ಮಾಡಿಕೊಂಡು ಬದುಕುವ ಜನಸಾಮಾನ್ಯರೆ ನ್ಯಾಯಬೆಲೆ ಅಂಗಡಿಗೆ ಬರುವುದು. ಆದರೆ ಒಂದು ದಿನ ಕೂಲಿ ಕೆಲಸಕ್ಕೆ ರಜೆ ಮಾಡಿ ನ್ಯಾಯಬೆಲೆ ಅಂಗಡಿಗೆ ಬಂದರೆ ಸರ್ಕಾರ ನೀಡಿರುವ ಪಿ.ಓ.ಎಸ್ ಯಂತ್ರ ಕ್ಕೆ ಹೆಬ್ಬೆಟ್ಟು ಗುರುತು ಬೀಳದ ಕಾರಣದಿಂದ ಅವರಿಗೆ ದಿನಸಿ ಸಿಗದೆ ಮತ್ತೊಂದು ದಿನ ಬರುವಂತೆ ಸೂಚಿಸುತ್ತಾರೆ. ಇದರಿಂದ ತಿಂಗಳಲ್ಲಿ ಎರಡರಿಂದ ಮೂರು ಬಾರಿ ನ್ಯಾಯಬೆಲೆ ಅಂಗಡಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಾಜ ಸೇವಕ ಅಲ್ತಾಫ್ ಬಿಳಗುಳ ಫಸ್ಟ್ ಸುದ್ದಿಗೆ ತಿಳಿಸಿದ್ದಾರೆ. ಆದ್ದರಿಂದ ಸರ್ಕಾರ ಈ ನೀತಿಯನ್ನು ಬದಲಿಸಿ ಒಂದು ಬಾರಿ ಹೆಬ್ಬೆಟ್ಟು ಗುರುತು ಪಡೆದ ನಂತರ ಪ್ರತಿ ತಿಂಗಳು ಕಾರ್ಡ್‍ದಾರರಿಗೆ ದಿನಸಿ ಸಿಗುವಂತೆ ವ್ಯವಸ್ಥೆ ಮಾಡಲಿ ಎಂದು ಆಗ್ರಯಿಸಿದ್ದಾರೆ.