ಮನೆ ಮೇಲೆ ಧ್ವಜ ಕಟ್ಟುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಟೆಕ್ಕಿ ಸಾವು…

45
firstsuddi

ಬೆಂಗಳೂರು : ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮೇಲೆ ರಾಷ್ಟ್ರಧ್ವಜ ಕಟ್ಟುತ್ತಿದ್ದ ವೇಳೆ ಸಾಫ್ಟ್​ವೇರ್​ ಇಂಜಿನಿಯರ್ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಗರದ ಹೆಚ್ ಬಿಆರ್ ಲೇಔಟ್ ನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ವಿಶುಕುಮಾರ್ (33) ಮೃತ ದುರ್ದೈವಿ. ನಿನ್ನೆ ಮಧ್ಯಾಹ್ನ 1.45 ಸುಮಾರಿಗೆ ವಿಶುಕುಮಾರ್ ತ್ರಿವರ್ಣ ಧ್ವಜ ಕಟ್ಟಲು ಎರಡನೇ ಮಹಡಿಯಲ್ಲಿನ ಮನೆ ಟೆರೇಸ್ ಮೇಲೆ ಏರಿದ್ದರು. ಈ ವೇಳೆ ಆಯತಪ್ಪಿ 30 ಅಡಿ ಮೇಲಿಂದ ಕೆಳಗೆ ಬಿದ್ದಿದ್ದರಿಂದ ವಿಶುಕುಮಾರ್ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಕೊನೆಯುಸಿರೆಳೆದ್ದಾರೆ.

ಘಟನೆ ಸಂಬಂಧ ವಿಶುಕುಮಾರ್ ತಂದೆ ನಾರಾಯಣ ಭಟ್ ಅವರು ದೂರು ನೀಡಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.