ಉಡುಪಿ : ಜಿಲ್ಲೆಯಲ್ಲಿ ನಾಲ್ವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೂಡೆಯಲ್ಲಿ ಪಿಎಫ್ಐ ಮುಖಂಡ ಇಲ್ಯಾಸ್ ಹೂಡೆಯನ್ನು ಮಲ್ಪೆ ಪೊಲೀಸರು, ಕುಂದಾಪುರದ ಆಶಿಕ್ ಕೋಟೇಶ್ವರನನ್ನು ಕುಂದಾಪುರ ಪೊಲೀಸರು, ಗಂಗೊಳ್ಳಿಯಲ್ಲಿ ಪಿಎಫ್ಐ ಕಾರ್ಯಕರ್ತ ರಜಾಬ್ ಮತ್ತು ಬೈಂದೂರಿನಲ್ಲಿ ಪಿಎಫ್ಐ ಕಾರ್ಯಕರ್ತ ಕಲಿಲ್ ಸೈಯದ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಎನ್ಐಎ ದಾಳಿ ನಂತರ ಹೆಚ್ಚು ನಿಗಾ ವಹಿಸಿದ್ದೆವು. ಬಂಧಿತರ ಹಲವಾರು ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಯಲಿದೆ ಮತ್ತು ಹಿಂದಿನ ಕ್ರಿಮಿನಲ್ ಚಟುವಟಿಕೆಗಳನ್ನು ಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಉಡುಪಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.










