ದುರ್ಗಾ ದೇವಿ ವಿಗ್ರಹ ವಿರೂಪಗೊಳಿಸಿದ ಇಬ್ಬರು ಮಹಿಳೆಯರು ಅರೆಸ್ಟ್…

68
firstsuddi

ಹೈದರಾಬಾದ್ : ಇಬ್ಬರು ಬುರ್ಖಾಧಾರಿ ಮಹಿಳೆಯರು ದುರ್ಗಾ ದೇವಿಯ ವಿಗ್ರಹವನ್ನು ವಿರೂಪಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಇಬ್ಬರು ಮಹಿಳೆಯರು ನಗರದ ಖೈರತಾಬಾದ್ ಪ್ರದೇಶದ ದುರ್ಗಾ ಮಂಟಪಕ್ಕೆ ನುಗ್ಗಿದ್ದಾರೆ. ಆ ಮಹಿಳೆಯರಲ್ಲಿ ಒಬ್ಬಾಕೆ ಸ್ಪ್ಯಾನರ್ ನಿಂದ ವಿಗ್ರಹದ ಮೇಲೆ ದಾಳಿ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಆಕೆಯನ್ನು ತಡೆಯಲು ಮುಂದಾದ ಸ್ಥಳೀಯರ ಮೇಲೂ ಇಬ್ಬರು ಮಹಿಳೆಯರು ಸೇರಿ ಹಲ್ಲೆ ನಡೆಸಿದ್ದಾರೆ. ದುರ್ಗಾ ದೇವಿಯ ಪಕ್ಕದಲ್ಲಿರುವ ಸಿಂಹವನ್ನು ವಿರೂಪಗೊಳಿಸಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಬುರ್ಖಾಧಾರಿ ಮಹಿಳೆಯರನ್ನು ಸೈದನಾಬಾದ್ ಪೊಲಿಸರು ಬಂಧಿಸಿದ್ದಾರೆ.

ಕೇಂದ್ರ ವಲಯದ ಡಿಸಿಪಿ ರಾಜೇಶ್ ಚಂದ್ರ ಮಾತನಾಡಿ, ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರು ಮಹಿಳೆಯರು ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ದೇವಿಯ ಮಂಟಪಕ್ಕೆ ನುಗ್ಗಿ ವಿಗ್ರಹವನ್ನು ವಿರೂಪಗೊಳಿಸಿದ್ದಾರೆ. ಈ ಕುರಿತು ಸ್ಥಳೀಯರಿಂದ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದರು.

ಬಂಧಿತರಾಗಿರುವ ಇಬ್ಬರೂ ಮಹಿಳೆಯರು ಮಾನಸಿಕ ಅಸ್ವಸ್ಥರಂತೆ ಕಂಡು ಬರುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.