ಮಲೆನಾಡಿನ ಅಪರೂಪದ ಹಕ್ಕಿಗಳನ್ನು ಭೇಟೆಯಾಡುತ್ತಿದ್ದ ಇಬ್ಬರ ಬಂಧನ

873
firstsuddi

ಚಿಕ್ಕಮಗಳೂರು- ಮಲೆನಾಡಿನ ಅಪರೂಪದ ಹಕ್ಕಿಗಳನ್ನು ಭೇಟೆ ಮಾಡಿ ಪ್ರಸಿದ್ದ ಹೊಟೇಲ್ ಗಳಿಗೆ ಸರಬರಾಜು ಮಾಡುತ್ತಿದ್ದ ಪ್ರಭು ಹಾಗೂ ಶ್ರೀನಿವಾಸ್ ಎಂಬುವವರನ್ನು ಕಾಮೇನಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ವಲಯ ಅರಣ್ಯಾಧಿಕಾರಿ ಶಿಲ್ಪ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದು, ಬಂಧಿತರಿಂದ ಸುಮಾರು 40ಕ್ಕೂ ಹೆಚ್ಚು ಅಪರೂಪದ ಹಕ್ಕಿಗಳನ್ನು ವಶಕ್ಕೆ ಪಡೆದಿದ್ದು ಮೈನಾ,ಸ್ಪಾಟೆಡ್ ಡಾವ್,ರಿಂಗ್ಬನೆಕೆಡ್

ಡಾವ್,ಗೀಜಗಾ, ಗೂಬೆ,ಸೇರಿದಂತೆ ಹಲವು ಜಾತಿಯ ಹಕ್ಕಿಗಳನ್ನು ಭೇಟೆ ಮಾಡಿ ಪ್ರವಾಸಿಗರಿಗಾಗಿ ಚಿಕ್ಕಮಗಳೂರು ಹಾಗೂ ಹಾಸನದ ಪ್ರಸಿದ್ದ ಹೊಟೇಲ್ ಗಳಿಗೆ ರವಾನೆ ಆಗುತ್ತಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.