ಎನ್ಎಸ್ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣಗೆ ಜಾಮೀನು…

73
firstsuddi

ನವದೆಹಲಿ : ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ)ದ ಸಿಇಒ ಚಿತ್ರಾ ರಾಮಕೃಷ್ಣ ಮತ್ತು ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರಿಗೆ ದೆಹಲಿ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.

ಎನ್ಎಸ್ಇಯ ಇಬ್ಬರು ಮಾಜಿ ಅಧಿಕಾರಿಗಳಿಗೆ ‘ಕಾನೂನುಬದ್ಧ ಜಾಮೀನು’ ನೀಡುತ್ತಿರುವುದಾಗಿ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ತಿಳಿಸಿದ್ದಾರೆ.

2018 ರಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್ಎಸ್ಇ) ಅಕ್ರಮಗಳ ಬಗ್ಗೆ ಬಹಿರಂಗವಾದ ನಂತರ ಎಫ್ಐಆರ್ ದಾಖಲಿಸಲಾಗಿದೆ. ದೇಶದ ಅತಿದೊಡ್ಡ ಷೇರುಪೇಟೆಯಲ್ಲಿ ಶಂಕಿತ ಕಾರ್ಪೊರೇಟ್ ಆಡಳಿತದ ಲೋಪಗಳ ತನಿಖೆಯ ಭಾಗವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮಾಜಿ ಎನ್ಎಸ್ಇ ಸಿಇಒ ಚಿತ್ರಾ ರಾಮಕೃಷ್ಣ ಮತ್ತು ಅವರ ಆಗಿನ ಸಲಹೆಗಾರ ಆನಂದ್ ಸುಬ್ರಮಣಿಯನ್ ಅವರನ್ನು ಪ್ರಶ್ನಿಸಿದೆ.

ವಿಚಾರಣಾ ನ್ಯಾಯಾಲಯವು ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ ಸಿಬಿಐ ಮಾರ್ಚ್ 6 ರಂದು ಅವರನ್ನು ಬಂಧಿಸಿತ್ತು. ಮಾರುಕಟ್ಟೆ ವಿನಿಮಯ ಕೇಂದ್ರಗಳ ಕಂಪ್ಯೂಟರ್ ಸರ್ವರ್ ಗಳಿಂದ ಸ್ಟಾಕ್ ಬ್ರೋಕರ್ ಗಳಿಗೆ ಮಾಹಿತಿಯ ಅಸಮರ್ಪಕ ಪ್ರಸರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.