ಭಾರತ್ ಜೋಡೋ ಯಾತ್ರೆ ಬ್ಯಾನರ್ ತೆರವುಗೊಳಿಸಿದ ಬಳ್ಳಾರಿ ಪಾಲಿಕೆ – ಕಾಂಗ್ರೆಸ್ ನಾಯಕರ ತೀವ್ರ ವಿರೋಧ…

45
firstsuddi

ಬಳ್ಳಾರಿ : ಮಹಾನಗರ ಪಾಲಿಕೆ ನಗರದಲ್ಲಿ ಅನಧಿಕೃತವಾಗಿ ಹಾಕಿದ್ದ ಬ್ಯಾನರ್​ಗಳನ್ನು ತೆರವು ಮಾಡಲಾಗಿದ್ದು, ಪಾಲಿಕೆಯ ವರ್ತನೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಪರವಾನಗಿ ಇಲ್ಲದೆ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳ ಇಕ್ಕೆಲಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಲಾಗಿತ್ತು. ಪಾಲಿಕೆ ಆಯುಕ್ತ ರುದ್ರೇಶ್ ನೇತೃತ್ವದಲ್ಲಿ ಸಂಗಮ್ಮ ಸರ್ಕಲ್, ರಾಯಲ್ ಸರ್ಕಲ್ ಸೇರಿದಂತೆ ಹಲವೆಡೆ ಬ್ಯಾನರ್ ತೆರವುಗೊಳಿಸಲಾಯಿತು.

ಸಮಾವೇಶ ಹಿನ್ನೆಲೆ ಅತಿ ಹೆಚ್ಚು ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಸುಂದರೀಕರಣಕ್ಕೆ ಮಾರಕ ಮತ್ತು ಸಾರ್ವಜನಿಕ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ರಾತ್ರೋರಾತ್ರಿ ಜೆಸಿಬಿ ಬಳಸಿ ಬ್ಯಾನರ್ ತೆರವು ಮಾಡಲಾಯಿತು.

ಬ್ಯಾನರ್ ತೆರವಿಗೆ ಕಾಂಗ್ರೆಸ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೇವಲ ಕಾಂಗ್ರೆಸ್ ಬ್ಯಾನರ್ ತೆರವು, ಬಿಜೆಪಿ ಬ್ಯಾನರ್ ತೆರವು ಏಕಿಲ್ಲ? ಇಂತಹ ರಾಜಕೀಯ ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.