ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಿಎಸ್ಐ.

65
firstsuddi

ಮಂಗಳೂರು : ಸೆಂಟ್ರಲ್ ಇಂಡಸ್ಟ್ರೀಯ ಸೆಕ್ಯೂರಿಟಿ ಫೋರ್ಸ್ ನ(ಸಿಐಎಸ್ಎಫ್) ಪಿಎಸ್ಐವೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಎನ್ ಎಂಪಿಎದ ಪ್ರಮುಖ ದ್ವಾರದ ಗೇಟ್ ಬಳಿ ನಡೆದಿದೆ.

ಎನ್ಎಂಪಿಎಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಐಎಸ್ಎಫ್ ನ ಪಿಎಸ್ಐ ಜ್ಯೋತಿ ಬಾಯಿ ಎಂಬುವರು ಇಂದು ಬೆಳಗ್ಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ರಾಜಸ್ಥಾನದ ಭಾರತ್ ಪುರ್ ಜಿಲ್ಲೆಯವರು. ಸದ್ಯ ಗಂಭೀರ ಗಾಯಗೊಂಡಿರುವ ಜ್ಯೋತಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೌಟಂಬಿಕ ಕಾರಣಗಳಿಂದಾಗಿ ಜ್ಯೋತಿ ಅವರು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.