ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದು : ಅಮೆರಿಕ ಅಧ್ಯಕ್ಷ.

53
firstsuddi

ವಾಷಿಂಗ್ಟನ್ : ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ. ಭಯೋತ್ಪಾದನೆ ಜಗತ್ತಿಗೆ ದೊಡ್ಡ ಸವಾಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದ್ದಾರೆ.

ನಿನ್ನೆ ನಡೆದ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಪ್ರಕಾರ ಪಾಕಿಸ್ತಾನ ಬಹುಶಃ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ. ಯಾವುದೇ ಒಗ್ಗಟ್ಟು ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಹೇಳಿದರು. ಯುಎಸ್ ಜೊತೆಗಿನ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶೆಹಬಾಜ್ ಷರೀಫ್ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಬೈಡೆನ್ ಉಲ್ಲೇಖಿಸಿದ್ದಾರೆ.

US ಮತ್ತು ಪಾಕಿಸ್ತಾನವು F-16 ಫ್ಲೀಟ್ ನಲ್ಲಿ ರಕ್ಷಣಾ ಒಪ್ಪಂದವನ್ನು ಕಾರ್ಯರೂಪಕ್ಕೆ ತಂದ ನಂತರ ಬೈಡೆನ್ ಅವರು ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.