ಉಕ್ರೇನ್ ಮೇಲೆ ಮತ್ತೆ ಕ್ಷಿಪಣಿ ದಾಳಿ ನಡೆಸುವುದಿಲ್ಲ : ರಷ್ಯಾ ಅಧ್ಯಕ್ಷ ಪುಟಿನ್.

81
firstsuddi

ಮಾಸ್ಕೋ : ಇನ್ನು ಮುಂದೆ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ತನ್ನ ಕನಸಿನ ಕ್ರಿಮಿಯಾ ಸೇತುವೆಯ ಮೇಲಿನ ದಾಳಿಗೆ ಪ್ರತಿಯಾಗಿ ಉಕ್ರೇನ್ ವಿರುದ್ಧ ರಷ್ಯಾ ದಾಳಿಯನ್ನು ಹೆಚ್ಚಿಸಿದ ಕೆಲವೇ ದಿನಗಳ ನಂತರ, ಪುಟಿನ್ ಈ ಹೇಳಿಕೆ ನೀಡಿದ್ದಾರೆ. ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿಯನ್ನು ರಷ್ಯಾ ನಡೆಸುವುದಿಲ್ಲ. ಕ್ರೆಮ್ಲಿನ್ ನ ಗುರಿಯು ಪಾಶ್ಚಿಮಾತ್ಯ ದೇಶವನ್ನು ನಾಶಗೊಳಿಸುವುದು ಅಲ್ಲ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.

ರಷ್ಯಾದ ಮಾರಣಾಂತಿಕ ಕ್ಷಿಪಣಿ ದಾಳಿಯಿಂದಾಗಿ ಉಕ್ರೇನ್ ನ ಹಲವು ಮೂಲ ಸೌಕರ್ಯಗಳಿಗೆ ಹೊಡೆತ ಬಿದ್ದಿದೆ. ಅಲ್ಲದೇ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾದ ಮಿಲಿಟರಿ ದಾಳಿಯನ್ನು ವಿಶ್ವದ ಅನೇಕ ನಾಯಕರು ಖಂಡಿಸಿದರು. ಇದರಿಂದ ರಷ್ಯಾ ತನ್ನ ಕ್ಷಿಪಣಿ ದಾಳಿಯಿಂದ ಹಿಂದೆ ಸರಿದಿದೆ.

ಫೆಬ್ರವರಿಯಲ್ಲಿ ಉಕ್ರೇನ್- ರಷ್ಯಾದ ನಡುವೆ ಯುದ್ಧ ಪ್ರಾರಂಭವಾಯಿತು. ಆರಂಭದ ದಿನಗಳಿಂದಲೂ ಕೈವ್ ಮತ್ತು ಇತರ ಉಕ್ರೇನಿಯನ್ ನಗರಗಳ ಮೇಲೆ ರಷ್ಯಾ ಭಾರೀ ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಉಕ್ರೇನ್ ಕ್ರಿಮಿಯಾ ಸೇತುವೆಯನ್ನು ಉಡೀಸ್ ಮಾಡಿತ್ತು. ಇದರಿಂದ ಕೋಪಗೊಂಡಿದ್ದ ಪುಟಿನ್ ಉಕ್ರೇನ್ ಮೇಲೆ ಬಹು ಕ್ಷಿಪಣಿ ದಾಳಿ ನಡೆಸಿದ್ದರು. ಇದು ಕ್ರಿಮಿಯಾ ಸೇತುವೆ ಹಾನಿಗೊಳಗಾಗಿದ್ದಕ್ಕೆ ಪ್ರತಿಕಾರ ಅಂತ ಎಚ್ಚರಿಸಿದ್ದರು.