ಶ್ರೀಲಂಕಾವನ್ನು ಸೋಲಿಸಿ ಏಳನೇ ಬಾರಿ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ ಮಹಿಳಾ ತಂಡ.

107
firstsuddi

ಢಾಕ : ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶ್ರೀಲಂಕಾವನ್ನು ಸೋಲಿಸಿ ಏಳನೇ ಬಾರಿ ಏಷ್ಯಾಕಪ್ ಗೆದ್ದು ದಾಖಲೆ ಬರೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ರೇಣುಕಾ ಸಿಂಗ್ 3, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಪಡೆದು ಲಂಕಾ ತಂಡವನ್ನು 65 ರನ್ ಗಳ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಲಂಕಾ ನೀಡಿದ ಅಲ್ಪಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಬ್ಯಾಟಿಂಗ್ ನಲ್ಲಿ ನೆರವಾದರು. ಆರಂಭಿಕರಾಗಿ ಮಂಧಾನ ಜೊತೆ ಕಣಕ್ಕಿಳಿದ ಶಿಫಾಲಿ ವರ್ಮಾ 5 ರನ್ ಗಳಿಗೆ ವಿಕೆಟ್ ಕೈಚೆಲ್ಲಿಕೊಂಡರು. ಆದರೆ ಇತ್ತ ಮಂಧಾನ ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 51 ರನ್ (925 ಎಸೆತ, 6 ಬೌಂಡರಿ, 3 ಸಿಕ್ಸ್) ಚಚ್ಚಿ ಗೆಲುವಿನ ರೂವಾರಿಯಾದರು.

ಮಂಧಾನಗೆ ಉತ್ತಮ ಸಾಥ್ ನೀಡಿದ ಹರ್ಮನ್ ಪ್ರೀತ್ ಕೌರ್ ಅಜೇಯ 11 ರನ್ (14 ಎಸೆತ, 1 ಬೌಂಡರಿ) ಸಿಡಿಸಿ 8.3 ಓವರ್ ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 71 ರನ್ ಬಾರಿಸಿ ಗೆಲ್ಲಿಸಿದರು. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ಟೀಂ 8 ವಿಕೆಟ್ ಗಳ ಜಯಭೇರಿ ಭಾರಿಸಿದೆ.