ಕೊರೊನಾ ಸೋಂಕಿತ ಆಟಗಾರರಿಗೂ ಟಿ20 ವಿಶ್ವಕಪ್ ಆಡಲು ಅವಕಾಶ…

95
firstsuddi

ಸಿಡ್ನಿ : ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಿನ್ನೆಯಿಂದ ಆರಂಭವಾಗಿದೆ. ಈ ಟೂರ್ನಿಯಲ್ಲಿ ಕೊರೊನಾ ಸೋಂಕಿತ ಆಟಗಾರರಿಗೂ ಆಡಲು ಐಸಿಸಿ ಅವಕಾಶ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಹಿಂದೆ, ಯಾವುದೇ ಆಟಗಾರರಿಗೆ ಕೊರೊನಾ ಸೋಂಕು ತಗುಲಿದರೆ ಆ ಆಟಗಾರ ತಂಡದಿಂದ ಬೇರ್ಪಟ್ಟು ನಿರ್ದಿಷ್ಟ ದಿನಗಳವರೆಗೆ ಕ್ವಾರಂಟೈನ್ ನಲ್ಲಿರಬೇಕಿತ್ತು. ಆದರೆ, ಇತ್ತೀಚೆಗೆ ಐಸಿಸಿ ಇದರಲ್ಲಿ ಪ್ರಮುಖ ಬದಲಾವಣೆ ಮಾಡಿದ್ದು, ಕೊರೊನಾ ಪಾಸಿಟಿವ್ ಇದ್ದರೂ ಆಟಗಾರರಿಗೆ ವಿಶ್ವಕಪ್ ನಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ.

2022 ರ ಕಾಮನ್ ವೆಲ್ತ್ ಗೇಮ್ಸ್ ಫೈನಲ್ ನಲ್ಲೂ ಕೊರೊನಾ ಸೋಂಕಿತ ಆಟಗಾರರಿಗೆ ತಂಡದಲ್ಲಿ ಆಡಲು ಐಸಿಸಿ ಅವಕಾಶ ನೀಡಿತ್ತು. ಕಾಮನ್ ವೆಲ್ತ್ ಗೇಮ್ಸ್ ಫೈನಲ್ ನಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ತಹ್ಲಿಯಾ ಮೆಕ್ ಗ್ರಾತ್ ಗೆ ಕೊರೊನಾ ಸೋಂಕು ತಗುಲಿತ್ತು. ಆದರೂ ಐಸಿಸಿ ಅವರಿಗೆ ತಂಡದಲ್ಲಿ ಆಡಲು ಅವಕಾಶ ನೀಡಿತ್ತು. ಆದರೆ ತಹ್ಲಿಯಾ ಮಾಸ್ಕ್ ಹಾಕಿಕೊಂಡು ತಂಡದಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು.