ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭ ಕೋರಿದ ಗಣ್ಯರು…

49
firstsuddi

ನವದೆಹಲಿ/ಬೆಂಗಳೂರು : ದೇಶಾದ್ಯಂತ ಇಂದಿನಿಂದ ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ದೇಶದ ಜನರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

ದೇಶದ ಎಲ್ಲಾ ಜನರಿಗೆ ದೀಪಾವಳಿಯ ಶುಭಾಶಯಗಳು! ಬೆಳಕು ಮತ್ತು ಸಂತೋಷದ ಈ ಪವಿತ್ರ ಹಬ್ಬದಂದು ಜ್ಞಾನ ಮತ್ತು ಶಕ್ತಿಯ ದೀಪವನ್ನು ಬೆಳಗಿಸುವ ಮೂಲಕ ಅಗತ್ಯವಿರುವವರ ಜೀವನದಲ್ಲಿ ಸಂತೋಷವನ್ನು ತರಲು ಪ್ರಯತ್ನಿಸೋಣ. ಈ ಮಹಾನ್ ಹಬ್ಬದಂದು ಎಲ್ಲಾ ಜನರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ದ್ರೌಪದಿ ಮುರ್ಮು ಶುಭ ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ದೀಪಾವಳಿ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಯೋಗಕ್ಷೇಮದ ಉತ್ಸಾಹವನ್ನು ಹೆಚ್ಚಿಸಲಿ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ಭುತವಾದ ದೀಪಾವಳಿಯನ್ನು ಆಚರಿಸಿರಿ ಎಂದು ಹೇಳಿದ್ದಾರೆ.

ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಸರ್ವರ ಬಾಳಲ್ಲಿ ಸಂಕಷ್ಟಗಳು ದೂರವಾಗಿ, ಸುಖ, ಶಾಂತಿಃ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಎಲ್ಲರಿಗೂ ಸಂಭ್ರಮ, ಸಂತೋಷದ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು. ಈ ದೀಪಾವಳಿಯು ಎಲ್ಲರ ಜೀವನದಲ್ಲಿ ಆರೋಗ್ಯ, ಸುಖ, ಸಮೃದ್ಧಿಗಳ ಬೆಳಕನ್ನು ಹೊತ್ತು ತರಲಿ, ಎಲ್ಲೆಡೆ ಸಡಗರ, ಸಂಭ್ರಮ, ಸದ್ಭಾವಗಳ ಹೊಂಬೆಳಕನ್ನು ಮೂಡಿಸಲಿ ಎಂದು ಪ್ರಾರ್ಥಿಸೋಣ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ದೀಪಗಳ ಹಬ್ಬ ದೀಪಾವಳಿ ನಮ್ಮೆಲ್ಲರ ಬದುಕಿನಲ್ಲಿ ನಕರಾತ್ಮಕ ಶಕ್ತಿ ಎಂಬ ಬೆಳಕನ್ನು ನಿತ್ಯವೂ ಹೊಸ ಹುಮ್ಮಸ್ಸಿನೊಂದಿಗೆ ಪ್ರಜ್ವಲಿಸಲಿ ಎಂದು ಪ್ರೀತಿಪೂರ್ವಕ ಹಾರೈಕೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬ ಸುಖ, ಶಾಂತಿ, ನೆಮ್ಮದಿ, ಆಯುಷ್ಯ, ಆರೋಗ್ಯ, ಇಷ್ಟಾರ್ಥಗಳನ್ನು ಸಮೃದ್ಧಿಯಾಗಿ ಕರುಣಿಸಲಿ ಎಂದು ಕಟೀಲಮ್ಮನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.