ಮೈಸೂರು : ಕೆಎಸ್ಆರ್ಟಿಸಿ ಬಸ್ ಹರಿದು 14 ವರ್ಷದ ಬಾಲಕ ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ಬಳಿ ನಡೆದಿದೆ.
ಹೆಚ್ಡಿ ಕೋಟೆ ತಾಲೂಕಿನ ನಂಜೀಪುರ ಗ್ರಾಮದ ಪ್ರಜ್ವಲ್(14) ಮೃತ ಬಾಲಕ. ತಂದೆಯ ಜೊತೆ ಬಸ್ ಹತ್ತುವಾಗ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ದುರ್ಘಟನೆ ಸಂಭವಿಸಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










