ಈ ಬಾರಿ ಮೈಸೂರು ದಸರಾಗೆ ಖರ್ಚಾಗಿದ್ದು ಎಷ್ಟು ಕೋಟಿ?

56
firstsuddi

ಮೈಸೂರು : ಈ ಬಾರಿ ನಾಡಹಬ್ಬ ಮೈಸೂರು ದಸರಾಗೆ ಬರೋಬ್ಬರಿ 28 ಕೋಟಿ ರೂಪಾಯಿ ಖರ್ಚಾಗಿದೆ. ಮೈಸೂರು ದಸರಾದ ಖರ್ಚು ವೆಚ್ಚದ ವಿವರವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ನೀಡಿದರು.

ದಸರಾ ಉತ್ಸವ ಆಚರಣೆಗೆ ಮೈಸೂರು ಜಿಲ್ಲಾಡಳಿತಕ್ಕೆ ವಿವಿಧ ಮೂಲಗಳಿಂದ ಒಟ್ಟು 31 ಕೋಟಿ 8 ಲಕ್ಷ ರೂಪಾಯಿ ಹಣ ಸಂದಾಯವಾಗಿತ್ತು. ಇದರಲ್ಲಿ 76 ಲಕ್ಷ ರೂಪಾಯಿ ಗೋಲ್ಡ್ ಕಾರ್ಡ್ ಹಾಗೂ ದಸರಾ ಟಿಕೆಟ್ ಮಾರಾಟದಿಂದಲೇ ಬಂದಿದೆ. ಬಂದ 31 ಕೋಟಿ 8 ಲಕ್ಷ ರೂಪಾಯಿಯಲ್ಲಿ 28 ಕೋಟಿ 74 ಲಕ್ಷ ರೂಪಾಯಿ ದಸರಾಗೆ ಖರ್ಚಾಗಿದೆ.

ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗೆ ಬಿಡುಗಡೆಯಾದ ಅನುದಾನ ಕೂಡ ಇದರಲ್ಲಿ ಸೇರಿದೆ. ಮೈಸೂರಿನ ರಾಜಮನೆತನಕ್ಕೆ 47 ಲಕ್ಷ ರು. ಗೌರವಧನ ನೀಡಲಾಗಿದೆ. ಯುವದಸರಾ ಹಾಗೂ ಯುವ ಸಂಭ್ರಮಕ್ಕೆ 6 ಕೋಟಿ ರೂಪಾಯಿ ವೆಚ್ಚವಾಗಿದೆ.