ಮೋದಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ…

72
firstsuddi

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ನೇ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಉದ್ಘಾಟನೆ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಶೇಷತೆ ಏನು?
13,000 ಕೋಟಿ ವೆಚ್ಚದಲ್ಲಿ ಟರ್ಮಿನಲ್ 2 ಸ್ಥಾಪನೆ ಮಾಡಲಾಗಿದೆ. ಟರ್ಮಿನಲ್ 2 ಕರ್ನಾಟಕ ಪರಂಪರೆಯನ್ನು ಹಾಗೂ ಸಂಸ್ಕೃತಿಯ ಥೀಮ್ ಒಳಗೊಂಡಿದೆ. ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಟರ್ಮಿನಲ್-2, 2,55,645 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಪ್ರಯಾಣಿಕರಿಗೆ ವಿಭಿನ್ನ ಅನುಭವ ನೀಡುವ ನಿಟ್ಟಿನಲ್ಲಿ ಟರ್ಮಿನಲ್-2 ನಲ್ಲಿ ಸಂಪೂರ್ಣ ಹಸಿರಿನ ವಾತಾವರಣ ಇದೆ. ಟರ್ಮಿನಲ್ 2 ನಲ್ಲಿ ಒಂಬತ್ತು ಕಸ್ಟಮ್ಸ್ ಹ್ಯಾಂಡ್ ಬ್ಯಾಗೇಜ್ ಸ್ಕ್ರೀನಿಂಗ್ ಗೇಟ್ ಗಳನ್ನು ಹೊಂದಿದೆ. 22 ಪ್ರವೇಶ ಮತ್ತು ನಿರ್ಗಮನ ದ್ವಾರಗಳು. 5,932 ಲಾಂಜ್ ಆಸನ ವ್ಯವಸ್ಥೆ, 95 ಚೆಕ್-ಇನ್ ಬೇಸ್ ಹಾಗೂ 17 ಭದ್ರತಾ ಚೆಕ್ ಪಾಯಿಂಟ್ ವ್ಯವಸ್ಥೆ ಇದೆ.

ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯ. ಕೆಐಎಎಲ್ ನೂತನ ಟರ್ಮಿನಲ್ ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್ ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ.