ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ಧ್ವಂಸ ಮಾಡುತ್ತೇವೆ : ಮುತಾಲಿಕ್ ಎಚ್ಚರಿಕೆ…

64
firstsuddi

ಹುಬ್ಬಳ್ಳಿ : ಟಿಪ್ಪು 100 ಅಡಿ ಮೂರ್ತಿಯನ್ನು ಮೈಸೂರಿನಲ್ಲಿ ಪ್ರತಿಷ್ಠಾಪನೆ ಮಾಡುತ್ತೇವೆಂಬ ಶಾಸಕ ತನ್ವೀರ್ ಸೇಠ್ ಹೇಳಿಕೆ ಕುರಿತು ಮಾತನಾಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರಮೋದ್ ಮುತಾಲಿಕ್ ಇಲ್ಲಿನ ಈದ್ಗಾ ಮೈದಾನವನ್ನು ಗೋಮೂತ್ರದಿಂದ ಶುದ್ಧೀಕರಿಸಿ ಭಕ್ತ ಕನಕದಾಸ ಜಯಂತಿ ಆಚರಣೆ ಮಾಡಿದರು. ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯದಲ್ಲಿ ಮೂರ್ತಿ ಪೂಜೆ ಇಲ್ಲ ಅದು ಹೇಗೆ ನೀವು ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೀರಿ? ಇದು ಧರ್ಮ ವಿರೋಧಿ ಹೇಳಿಕೆ. ಈ ರೀತಿ ಹೇಳಿಕೆ ನೀಡಿದ್ದ ತನ್ವೀರ್ ಸೇಠ್ ನನ್ನು ಮುಸ್ಲಿಮರೇ ಗಲ್ಲಿಗೇರಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಧರ್ಮದ ಆಧಾರದಲ್ಲಿ ಬೇರೆಯಾದ ರಾಷ್ಟ್ರಗಳು, ಪಾಕಿಸ್ತಾನ ಹೇಗೆ ಮುಸ್ಲಿಂರಿಗೆ ಸೀಮಿತವೋ, ಹಾಗೆ ಭಾರತ ಹಿಂದೂ ರಾಷ್ಟ್ರ. ಸಂವಿಧಾನದಲ್ಲಿ ಬಲವಂತವಾಗಿ ಜಾತ್ಯಾತೀತ ಶಬ್ದ ಸೇರಿಸಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.