ಅಕ್ಕನ ಮೊಬೈಲ್ ಗೀಳು ಕಂಡು ಪಾಸ್​ವರ್ಡ್ ಚೇಂಜ್ ಮಾಡಿದ ತಮ್ಮ ; ಮನನೊಂದು ಯುವತಿ ಆತ್ಮಹತ್ಯೆ…

135
firstsuddi

ದೇವನಹಳ್ಳಿ : ಸಹೋದರ ತನ್ನ ಮೊಬೈಲ್ ಪಾಸ್​ವರ್ಡ್ ಬದಲಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ನಡೆದಿದೆ.

ರುಚಿತಾ(19) ಆತ್ಮಹತ್ಯೆ ಮಾಡಿಕೊಂಡ ಯುವತಿ. ರುಚಿತಾ ಮೊಬೈಲ್ ಫೋನ್ ಗೆ ಅಡಿಕ್ಟ್ ಆಗಿದ್ದಳು. ಅತಿಯಾಗಿ ಮೊಬೈಲ್ ಬಳಸುತ್ತಿದ್ದರಿಂದ ಮನೆಯವರಿಗೆ ಕಿರಿಕಿರಿಯಾಗಿತ್ತು. ಇದು ಹೀಗೆ ಮುಂದುವರೆದರೆ ಸಮಸ್ಯೆ ಎದುರಾಗಬಹುದೆಂದು ರುಚಿತಾ ತಮ್ಮ ಅಕ್ಕನ ಮೊಬೈಲ್ ಫೋನ್ ಪಾಸ್​ವರ್ಡ್ ಚೇಂಜ್ ಮಾಡಿದ್ದ.

ಮೊಬೈಲ್ ಪಾಸ್ ವರ್ಡ್ ಹೇಳುವಂತೆ ತಮ್ಮನನ್ನು ಎಷ್ಟೇ ಪೀಡಿಸಿದರು ಆತ ಹೇಳದಿದ್ದಕ್ಕೆ ಮನನೊಂದು ರುಚಿತಾ ನೇಣಿಗೆ ಶರಣಾಗಿದ್ದಾಳೆ. ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.