ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ 86 ರೌಡಿಶೀಟರ್ಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಐವರು ಎಸಿಪಿ, 30 ಇನ್ಸ್ ಪೆಕ್ಟರ್ ಗಳ ನೇತೃತ್ವದ ತಂಡ ದಾಳಿ ನಡೆಸಿದೆ.
ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿ ಕುಖ್ಯಾತ ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಹಲವರು ಮನೆಯಿಂದ ಎಸ್ಕೇಪ್ ಆಗಿರುವುದು ಕಂಡುಬಂದಿದೆ. 26 ರೌಡಿಶೀಟರ್ಗಳನ್ನ ಸಿಸಿಬಿ ಕಚೇರಿಗೆ ಕರೆತಂದು ಸಿಸಿಬಿ ಎಸಿಪಿ ಧರ್ಮೆಂದ್ರ ನೇತೃತ್ವದಲ್ಲಿ ಫುಲ್ ಕ್ಲಾಸ್ ಮಾಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದರೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ವಾರ್ನಿಂಗ್ ನೀಡಲಾಗಿದೆ.
ಸಿದ್ದಾಪುರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕುಳ್ಳ ರಿಜ್ವಾನ್ ಶಿಷ್ಯ ಸ್ಟಾರ್ ನವೀನ್ ಮನೆಯಲ್ಲಿ ಡ್ಯಾಗರ್ ಪತ್ತೆಯಾಗಿದ್ದು ಸಿಸಿಬಿ ದಾಳಿ ವೇಳೆ ನವೀನ್ ಎಸ್ಕೇಪ್ ಆಗಿದ್ದಾನೆ. ವಿಜಯನಗರ ಠಾಣಾ ವ್ಯಾಪ್ತಿಯಲ್ಲೂ ಸಿಸಿಬಿ ದಾಳಿ ನಡೆದಿ ಪರಿಶೀಲನೆ ನಡೆಸಿದೆ. ಈ ವೇಳೆ ವಿಜಯನಗರ ರೌಡಿಶೀಟರ್ ರಾಘವೇಂದ್ರ ಮನೆಯಲ್ಲಿ ಎರಡು ಲಾಂಗ್ ಗಳು ಪತ್ತೆಯಾಗಿವೆ.










