ಜಗತ್ತಿಗೆ ಮತ್ತೊಂದು ವೈರಸ್ ಭೀತಿ – 48,500 ವರ್ಷಗಳ ಹಿಂದಿನ ಜೋಂಬಿ ವೈರಸ್‌ಗೆ ಮರುಜನ್ಮ…

52
firstsuddi

ಮಾಸ್ಕೋ : ಜಗತ್ತಿಗೆ ಮತ್ತೊಂದು ವೈರಸ್ ಭೀತಿ ತಂದೊಡ್ಡಿದೆ. ಸುಮಾರು 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೂತಿದ್ದ ವೈರಸ್ ಗಳಿಗೆ ಈಗ ಮರುಜನ್ಮ ನೀಡಲಾಗಿದೆ.

‘ಜೋಂಬಿ ವೈರಸ್’ ಹೆಸರಿನ 13 ಹೊಸ ರೋಗಕಾರಕಗಳನ್ನು ಯುರೋಪಿಯನ್ ಸಂಶೋಧಕರು ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಅವು ಹೆಪ್ಪುಗಟ್ಟಿದ ನೆಲದಲ್ಲಿ ಸಹಸ್ರಮಾನಗಳನ್ನು ಕಳೆದರೂ ಅವು ಸಾಂಕ್ರಾಮಿಕವಾಗಿ ಉಳಿದಿವೆ ಎನ್ನಲಾಗಿದೆ.

ಈ ವೈರಸ್ ದೀರ್ಘಕಾಲದವರೆಗೆ ಸಾಂಕ್ರಾಮಿಕವಾಗಿ ಉಳಿಯಬಹುದು. ಒಮ್ಮೆ ಇವು ಹೊರಾಂಗಣ ಪರಿಸ್ಥಿತಿಗೆ ಹೊಂದಿಕೊಂಡರೆ ನಂತರದಲ್ಲಿ ಯಾವ ಪ್ರಮಾಣದಲ್ಲಿ ಸೋಂಕು ಹರಡುತ್ತದೆ, ಎಷ್ಟು ಪ್ರಮಾಣದಲ್ಲಿ ಅಪಾಯ ಬೀರುತ್ತದೆ ಅನ್ನೋದನ್ನ ಅಂದಾಜು ಮಾಡಲು ಸಾಧ್ಯವಿಲ್ಲ. ಈ ವೈರಸ್, ಮನುಷ್ಯ ಹಾಗೂ ಪ್ರಾಣಿಗಳಿಗೂ ತಗುಲುವಂತಹದ್ದಾಗಿದ್ದು, ಹೆಚ್ಚು ಸಮಸ್ಯಾತ್ಮಕವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.