ಲಕ್ನೋ : ಉತ್ತರಪ್ರದೇಶದ ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಮಹಿಳಾ ಪೊಲೀಸ್ ಪೇದೆಗಳು ಡಾನ್ಸ್ ಮಾಡಿದ್ದಕ್ಕೆ ನಾಲ್ವರನ್ನು ಅಮಾನತು ಮಾಡಲಾಗಿದೆ.
ನಾಲ್ವರು ಕಾನ್ಸ್ಸ್ಟೆಬಲ್ ಗಳಲ್ಲಿ ಒಬ್ಬರು ಭೋಜ್ ಪುರಿ ಹಾಡಿಗೆ ನೃತ್ಯ ಮಾಡಿದರೆ, ಇತರರು ಚಪ್ಪಾಳೆ ತಟ್ಟಿದ್ದರು, ಮತ್ತೋರ್ವ ಕಾನ್ಸ್ಸ್ಟೆಬಲ್ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.
ಭೋಜ್‌ಪುರಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ. ವಿಡಿಯೋದಲ್ಲಿ ಅಮಾನತುಗೊಂಡಿರುವ ಕಾನ್ಸ್ಸ್ಟೆಬಲ್ ಗಳು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮುನಿರಾಜ್ ಜಿ ಅವರು ಗುರುವಾರ ಹೆಚ್ಚುವರಿ ಎಸ್ಪಿ (ಭದ್ರತೆ) ಪಂಕಜ್ ಪಾಂಡೆ ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಕಾನ್ಸ್ಸ್ಟೆಬಲ್ ಗಳಾದ ಕವಿತಾ ಪಟೇಲ್, ಕಾಮಿನಿ ಕುಶ್ವಾಹಾ, ಕಾಶಿಶ್ ಸಾಹ್ನಿ ಮತ್ತು ಸಂಧ್ಯಾ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.
#Ayodhya: महिला सिपाहियों के द्वारा बनाया गया 'पतली कमरिया तोरी' पर रील। महिला सिपाहियों का विडियो हुआ वायराल। @ayodhya_police pic.twitter.com/YGn8rlj5cU
— Rahul kumar Vishwakarma (@Rahulku18382624) December 16, 2022










