ಬ್ರೆಜಿಲ್‌ನ ಫುಟ್ಬಾಲ್ ದಂತಕತೆ ಪೀಲೆ ನಿಧನ…

121
firstsuddi

ಬ್ರೆಸಿಲಿಯಾ : ಫುಟ್ಬಾಲ್ ದಂತಕತೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರೆಜಿಲ್ ನ ಪೀಲೆ (82) ನಿಧನರಾಗಿದ್ದಾರೆ

ಕ್ಯಾನ್ಸರ್ ಕಾಯಿಲೆ, ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಪೀಲೆ ಬಳಲುತ್ತಿದ್ದರು. 2021ರ ಸೆಪ್ಟೆಂಬರ್ ನಲ್ಲಿ ಪೀಲೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ದೊಡ್ಡ ಕರುಳಿನ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲಾಗಿತ್ತು. ಆದರೆ ಇತ್ತೀಚೆಗೆ ಅವರು ಕೋವಿಡ್ ಗೆ ತುತ್ತಾಗಿದ್ದರಿಂದ ಮತ್ತೆ ಕ್ಯಾನ್ಸರ್ ಸಮಸ್ಯೆ ಕೂಡ ಮರುಕಳಿಸಿತ್ತು.

ಮೂರು ವಿಶ್ವಕಪ್ ಗಳನ್ನು ಗೆದ್ದ ಇತಿಹಾಸದಲ್ಲಿ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ (1958, 1962 ಮತ್ತು 1970) ಪಾತ್ರರಾಗಿದ್ದಾರೆ. ಪೀಲೆ ಅವರು 1977ರಲ್ಲಿ ನಿವೃತ್ತರಾಗುವ ಮೊದಲು 1,000 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಕ್ರೀಡೆಯಲ್ಲಿ ಅತ್ಯಂತ ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದರು.

1956ರಿಂದ 1974ರ ವರೆಗೆ ಬ್ರೆಜಿಲ್ ನ ಸ್ಯಾಂಟೋಸ್ ಕ್ಲಬ್ ಪರ ಆಡಿದ್ದ ಪೀಲೆ 757 ಪಂದ್ಯಗಳಲ್ಲಿ 643 ಗೋಲ್ ಬಾರಿಸಿ ಫುಟ್ಬಾಲ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆ ಮೆರೆದಿದ್ದರು. ಮೂರು ಬಾರಿ ಮದುವೆಯಾಗಿರುವ ಪೀಲೆ ಅವರಿಗೆ 7 ಮಕ್ಕಳಿದ್ದಾರೆ. ಇನ್ನೂ ಪೀಲೆ ನಿಧನಕ್ಕೆ ಫುಟ್ಬಾಲ್ ಪ್ರೇಮಿಗಳು ಕಣ್ಣೀರಿಡುತ್ತಿದ್ದಾರೆ.