ದೇಹವನ್ನು ಮಣ್ಣು ಮಾಡಬೇಡಿ, ಅಗ್ನಿಸ್ಪರ್ಶ ಮಾಡಿ – 2014ರಲ್ಲಿ ಅಭಿವಂದನ ಪತ್ರ ಬರೆದಿದ್ದ ಸಿದ್ದೇಶ್ವರ ಶ್ರೀಗಳು.

66
firstsuddi

ವಿಜಯಪುರ : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವಯೋಸಹಜ ಅನಾರೋಗ್ಯದ ಕಾರಣದಿಂದ ನಿನ್ನೆ ಸಂಜೆ ಲಿಂಗೈಕ್ಯರಾಗಿದ್ದಾರೆ. ಶ್ರೀಗಳು ಅಭಿವಂದನ ಪತ್ರವನ್ನು ಬರೆದು ಬದುಕಿನ ಸಂದೇಶವನ್ನು ಸಾರಿದ್ದು, ತಮ್ಮ ಅಂತಿಮ ವಿಧಿ ವಿಧಾನಗಳ ಬಗ್ಗೆಯೂ ತಿಳಿಸಿ ಹೋಗಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿಗಳು ಆಪ್ತರೊಂದಿಗೆ ಚರ್ಚೆ ನಡೆಸಿ 2014ರಲ್ಲೇ ವಿಲ್ ಬರೆದಿಟ್ಟಿದ್ದಾರೆ. ಕಾಯವನ್ನು ಮಣ್ಣು ಮಾಡುವಂತಿಲ್ಲ, ಅಗ್ನಿ ಸ್ಪರ್ಶ ಮಾಡಬೇಕು. ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ ಬೇಕು. ಶ್ರಾದ್ಧ ಕರ್ಮಗಳನ್ನು ಮಾಡುವಂತಿಲ್ಲ. ಯಾವುದೇ ರೀತಿಯ ಸ್ಮಾರಕಗಳನ್ನು ನಿರ್ಮಿಸಬೇಡಿ ಅಂತ ವಿಲ್ ನಲ್ಲಿ ತಿಳಿಸಿದ್ದಾರೆ.

Siddeshwara Swamiji

ಸಿದ್ದೇಶ್ವರ ಶ್ರೀಗಳ ಮೃತದೇಹದ ಅಂತ್ಯಕ್ರಿಯೆಯನ್ನು ಸಕಾಲ ಸರ್ಕಾರಿ ಗೌರವಗಳೊಂದಿಗೆ ನೆರೆವೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸೈನಿಕ ಶಾಲೆ ಆವರಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಂಜೆ 5 ಗಂಟೆಯ ನಂತರ ಜ್ಞಾನಯೋಗಾಶ್ರಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.