ಬೆಂಗಳೂರು : ನಾನು ಇರೋದಾದ್ರೆ ಭಾರತದಲ್ಲಿಯೇ ಇರ್ತೀನಿ. ನಾನು ಪ್ರೀತಿಸಿ ಪ್ರೀತಿಗಾಗಿ ಅಲ್ಲಿಂದ ಬಂದಿದ್ದೇನೆ. ನಾನು ಆತನನ್ನು ಬಿಟ್ಟು ಹೋಗಲ್ಲ ಎಂದು ಪಾಕಿಸ್ತಾನದ ಯುವತಿ ಪಟ್ಟು ಹಿಡಿದಿದ್ದಾಳೆ.
ಪ್ರೀತಿಗಾಗಿ ದೇಶವನ್ನೇ ಬಿಟ್ಟು ಬಂದು ಭಾರತದ ಪ್ರಜೆಯನ್ನು ಮದುವೆಯಾಗಿರೋ ಪಾಕಿಸ್ತಾನದ ಯುವತಿ ಮತ್ತೊಂದು ವರಸೆ ತೆಗೆದಿದ್ದಾಳೆ. ನಾನು ಪಾಕಿಸ್ತಾನಕ್ಕೆ ಹೋಗಲ್ಲ, ನಾವಿಬ್ಬರು ಮದುವೆಯಾಗಿದ್ದೀವಿ. ಮುಲಾಯಂ ಸಿಂಗ್ ಯಾದವ್ ಬಿಟ್ಟು ಹೋಗಲ್ಲ ಎಂದು ಯುವತಿ ಪಟ್ಟು ಹಿಡಿದಿದ್ದಾಳಂತೆ.
ಸದ್ಯ ಇಕ್ರಾ ಜಿವಾನಿ ಎಫ್ಆರ್ಆರ್ಒ ಅಧೀನದಲ್ಲಿದ್ದಾಳೆ. ಇನ್ನೂ ಯುವತಿ ಭಾರತಕ್ಕೆ ಬಂದಿರೋದೆ ಅಕ್ರಮವಾದ ಕಾರಣ ಅಧಿಕಾರಿಗಳು ಯುವತಿಯನ್ನು ಪಾಕಿಸ್ತಾನಕ್ಕೆ ಡಿಪೋರ್ಟ್ ಮಾಡಲು ತಯಾರು ಮಾಡಿಕೊಳ್ಳುತ್ತಿದ್ದಾರೆ. ಯುವತಿಯನ್ನು ಕಳುಹಿಸಲು ಸುಮಾರು ಎರಡು ತಿಂಗಳು ಸಮಯ ಬೇಕಾಗುತ್ತದೆ. ಪಾಕಿಸ್ತಾನದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕಾಗುತ್ತದೆ. ಈ ನಡುವೆ ಮದುವೆ ಕಾರಣ ಕೊಟ್ಟು ಯುವತಿ ರಂಪಾಟ ಮಾಡುತ್ತಿದ್ದಾಳೆ.
ಇಕ್ರಾ ಜಿವಾನಿ ಮತ್ತು ಮುಲಾಯಂ ಸಿಂಗ್ ಮದುವೆ ಬಗ್ಗೆಯೇ ಪೊಲೀಸರಿಗೆ ಅನುಮಾನ ಮೂಡಿದೆ. ಪೊಲೀಸರ ವಿಚಾರಣೆ ವೇಳೆ ಇಬ್ಬರು ಮದುವೆಯಾಗಿದ್ದೀವಿ ಎಂದಿದ್ದಾರೆ. ಅದರೆ ಮದುವೆಯಾದ ಬಗ್ಗೆ ಯಾವುದೇ ಅಧಿಕೃತ ದಾಖಲೆ, ಪೋಟೊಗಳಿಲ್ಲ. ಮದುವೆಯಾದ ಬಗ್ಗೆ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಇಲ್ಲ. ಬೇರೆ ದಾಖಲಾತಿಗಳು ಕೂಡ ಪತ್ತೆಯಾಗಿಲ್ಲ. ಈ ರೀತಿ ಮದುವೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ವಿದೇಶಿ ಮಹಿಳೆಯನ್ನ ಮದುವೆಯಾದಾಗ ಕಾನೂನಾತ್ಮಕ ದಾಖಲೆ ಇರಬೇಕು. ಈ ಹಿನ್ನೆಲೆ ಮುಲಾಯಂ ಸಿಂಗ್ ಯಾದವ್ ನನ್ನು ಕಸ್ಟಡಿಗೆ ಪಡೆದು ಪೊಲೀಸರ ವಿಚಾರಣೆ ನಡೆಸಲು ಸಿದ್ದತೆ ನಡೆಸಿದ್ದಾರೆ. ಸದ್ಯ ಈ ಬಗ್ಗೆ ಹಲವು ಆಯಾಮಗಳಲ್ಲಿ ಬೆಳ್ಳಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










