ಗಣರಾಜ್ಯೋತ್ಸವ ಪರೇಡ್​ನಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧಚಿತ್ರ…

50
firstsuddi

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣತಂತ್ರ ದಿನಾಚರಣೆಯ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯಿತು.

ಪರೇಡ್ ನಲ್ಲಿ ಕರ್ನಾಟಕದಿಂದ ನಾರಿ ಶಕ್ತಿ ಸಾರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಯಿತು. ರಾಜ್ಯದ ಮಾದರಿ ಮಹಿಳೆಯರಾದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಗೂ ಸಾಲು ಮರದ ತಿಮ್ಮಕ್ಕ ಅವರ ಪ್ರತಿಕೃತಿಗಳನ್ನು ಹೊಂದಿದ ಸ್ತಬ್ಧಚಿತ್ರ ಹೊತ್ತ ವಾಹನ ಕರ್ತವ್ಯ ಪಥದಲ್ಲಿ ಸಾಗಿತು.

ಹೆರಿಗೆ ತಜ್ಞೆ- ಸೂಲಗಿತ್ತಿ ಪಾವಗಡದ ನರಸಮ್ಮ , ಹಾಲಕ್ಕಿ ಸಮುದಾಯದ ವೃಕ್ಷ ಮಾತೆ- ಉತ್ತರ ಕನ್ನಡದ ಅಂಕೋಲಾದ ತುಳಸಿಗೌಡ, ಪರಿಸರ ಪ್ರೇಮಿ- ತುಮಕೂರಿನ ಗುಬ್ಬಿಯ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಗುಣಗಾನ ಮಾಡುತ್ತಾ ಕಲಾವಿದರು ಹೆಜ್ಜೆ ಹಾಕಿದರು. ಸತತ 14 ವರ್ಷಗಳಿಂದ ಪಥ ಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.