ಧ್ರುವನಾರಾಯಣ ಪತ್ನಿ ವೀಣಾ ವಿಧಿವಶ…

105

ಮೈಸೂರು: ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ ಅವರ ಪತ್ನಿ ವೀಣಾ ಧ್ರುವನಾರಾಯಣ ಇಂದು ವಿಧಿವಶರಾಗಿದ್ದಾರೆ. ಕಳೆದ ತಿಂಗಳಷ್ಟೇ ಕೆಪಿಸಿಸಿ ಕಾರ್ಯಧ್ಯಕ್ಷ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಪತಿ ದಿವಂಗತ ಆರ್.ಧ್ರುವನಾರಾಯಣ ನಿಧನರಾಗಿ ಒಂದು ತಿಂಗಳು ಕಳೆಯುವದರ ಒಳಗಾಗಿ ಪತ್ನಿ ವೀಣಾ ಧ್ರುವನಾರಾಯಣ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಧ್ರುವನಾರಾಯಣ ಅವರ ಪತ್ನಿ ವೀಣಾ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.