ಸಖರಾಯಪಟ್ಟಣದ ಪಿ.ಎಸ್ ಐ ಸುನಿತಾ ಕಾರ್ಯಕ್ಕೆ ಸ್ಥಳಿಯರ ಮೆಚ್ಚುಗೆ…

1011
firstsuddi

ಚಿಕ್ಕಮಗಳೂರು: ಮಹಿಳಾ ಪಿಎಸ್ ಐ ಯೊರ್ವರು ರಸ್ತೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವೊಂದನ್ನ ಕಡಿದು ರಸ್ತೆಯ ಬದಿಗೆ ಎತ್ತಿ ಹಾಕಿ ಟ್ರಾಫಿಕ್ ಹಾಗೂ ರೋಡ್ ಕ್ಲಿಯರ್ ಮಾಡಿರುವಂತಹಾ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕ್ಷೀಣಿಸಿದ್ರು ಕೂಡ ಅಲ್ಲಲ್ಲೇ ಮಳೆ-ಗಾಳಿಯ ಆರ್ಭಟ ನಿಂತಿಲ್ಲ. ಮಳೆ-ಗಾಳಿಗೆ ಅಲ್ಲಲ್ಲೇ ಮರಗಳು ಧರೆಗುರುಳಿರೋದು ನಿಂತಿಲ್ಲ. ಕಡೂರು ತಾಲೂಕಿನ ಸಖರಾಯಪಟ್ಟಣದ ಸಬ್ಇನ್ಸ್ಪೆಕ್ಟರ್ ಸುನಿತಾ ಎನ್.ಆರ್.ಪುರ ತಾಲೂಕಿನ ನ್ಯಾಯಾಲಯಕ್ಕೆ ಹೋಗಿ ಮಲ್ಲಂದೂರು ಮಾರ್ಗವಾಗಿ ಬರುವಾಗ ಮಲ್ಲಂದೂರು-ಖಾಂಡ್ಯ-ಶೃಂಗೇರಿ ಮಾರ್ಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು. ವಾಹನಗಳು ಸಂಚಾರಿಸಲಾಗಿದೆ ಟ್ರಾಫಿಕ್ ಕೂಡ ಜಾಮ್ ಆಗಿತ್ತು. ಇದೇ ವೇಳೆ ಸ್ಥಳಕ್ಕೆ ಬಂದ ಸುನಿತಾ ವಿಥ್ ಯೂನಿಫಾರಂನಲ್ಲೇ ಸ್ಥಳಿಯರಂತೆ ಮರದ ಟೊಂಗೆಗಳನ್ನ ಕತ್ತರಿಸಿ ಸೈಡಿಗೆ ಎಸೆದು ರೋಡ್ ಹಾಗೂ ಟ್ರಾಫಿಕ್ನ ಕ್ಲೀಯರ್ ಮಾಡಿದ್ದಾರೆ. ಜನಸ್ನೇಹಿ ಪೊಲೀಸ್ ಅಂದ್ರೆ ಹೀಗಿರಬೇಕು ಎಂದು ಸ್ಥಳಿಯರು ಸಬ್ಇನ್ಸ್ಪೆಕ್ಟರ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.