ಅತೀಕ್ ಅಹ್ಮದ್ ಬೆಂಬಲಿಗ ಕಾಂಗ್ರೆಸ್ ಸ್ಟಾರ್ ಪ್ರಚಾರಕ: ಶೋಭಾ ಕರಂದ್ಲಾಜೆ

37
firstsuddi

ಬೆಂಗಳೂರು: ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ ಮಾಡಿದ್ದು, ಇಮ್ರಾನ್ ಪ್ರತಾಪ್ ಗರ್ಹಿಯಾಗಿದ್ದು, ಯುಪಿ ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್ ಬೆಂಬಲಿಗನಾಗಿದ್ದು, ಇಂಥವನನ್ನು ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕ ಮಾಡಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಮ್ರಾನ್ ಪ್ರತಾಪ್ ಗರ್ಹಿ ಶಾಯರಿ ಬರೆಯುವವನು, ಅವನ ಶಾಯರಿಗಳು ದೇಶ, ಸಮಾಜದ ವಿರುದ್ಧ ಇವೆ. ಇಮ್ರಾನ್‍ನನ್ನು ಮಹಾರಾಷ್ಟ್ರ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದೆ. ಗ್ಯಾಂಗ್‍ಸ್ಟರ್ ಕಾಯ್ದೆಯಡಿ ಬಂಧನವಾದವರ ಜೊತೆ ಇಮ್ರಾನ್ ಸಂಪರ್ಕ ಇದೆ. ಅಷ್ಟೇ ಅಲ್ಲದೇ ಇಮ್ರಾನ್ ಅತೀಕ್ ಅಹ್ಮದ್‍ನನ್ನು ಗುರು ಅಂತ ಹೇಳಿ ಕೊಳ್ಳುತ್ತಿದ್ದ. ಇಂತಹ ದೇಶದ್ರೋಹಿ, ಸಮಾಜ ದ್ರೋಹಿಯಾದ ಇಮ್ರಾನ್‍ರಂತಹವರ ಮೇಲೆ ಕಾಂಗ್ರೆಸ್‍ಗೆ ಬಹಳ ಪ್ರೀತಿಯಿದೆ.

ಈ ಹಿಂದೆ ಇಮ್ರಾನ್ ಕರ್ನಾಟಕಕ್ಕೆ ಬಂದು ಟಿಪ್ಪು ಪರ ಭಾಷಣ ಮಾಡಿದ್ದ. ಮುಸ್ಲಿಮರಿಗೆ ತಲೆ ತಗ್ಗಿಸಿ ಗೊತ್ತಿಲ್ಲ, ತಲೆ ಕಡಿದು ಗೊತ್ತಿದೆ ಎಂದು ಹೇಳಿದ್ದ. ಅಷ್ಟೇ ಅಲ್ಲದೇ ನಮ್ಮ ರಾಜ್ಯದ ಮುಸಲ್ಮಾನರನ್ನು ಎತ್ತಿ ಕಟ್ಟುವ ಯತ್ನ ನಡೆಸಿದ್ದ. ಇಮ್ರಾನ್ ಬಗ್ಗೆ ಕಾಂಗ್ರೆಸ್‍ಗೆ ಎಲ್ಲಾ ಗೊತ್ತಿದೆ. ಉತ್ತರ ಪ್ರದೇಶದಲ್ಲಿ ಹತ್ಯೆಯಾದ ಅತೀಕ್, ಅಶ್ರಫ್ ಜತೆ ಇಮ್ರಾನ್ ನಿಕಟವರ್ತಿ ಆಗಿದ್ದ. ಆದರೆ ಅಪರಾಧಿ ಹಾಗೂ ದೇಶದ್ರೋಹಿಗಳ ಜೊತೆ ಕಾಂಗ್ರೆಸ್ ಇದೆ. ಅದಕ್ಕೆ ಕಾಂಗ್ರೆಸ್ ಸ್ಟಾರ್ ಪ್ರಚಾರಕನಾಗಿ ಇಮ್ರಾನ್ ಪ್ರತಾಪ್ ಗರ್ಹಿಯನ್ನು ಬಳಸಿಕೊಳ್ಳುತ್ತಿದೆ. ಹಾಗಾದರೆ ಇಮ್ರಾನ್​ಗೂ, ಕಾಂಗ್ರೆಸ್​ಗೂ ಏನು ಸಂಬಂಧ? ಕಾಂಗ್ರೆಸ್ ಕೈ ಅಪರಾಧಿಗಳ ಜೊತೆ ಇದ್ದು, ಕಾಂಗ್ರೆಸ್ ಅಪರಾಧ ಕೃತ್ಯಗಳಿಗೆ ಕೈ ಜೋಡಿಸಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡಿದರು. ಆದರೆ ಯಾರೂ ಜಯಂತಿ ಮಾಡಿ ಅಂತ ಕೇಳಿರ್ಲಿಲ್ಲ. ಎಸ್‍ಡಿಪಿಐ ಕಾರ್ಯಕರ್ತರ 1,700 ಕೇಸ್ ವಾಪಸ್ ತೆಗೆದುಕೊಂಡರು. ಗೋಹತ್ಯೆಕೋರರ ಪರ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಬೆಂಬಲ ಇಂಥವರ ಪರ ಇದೆ. ಅಷ್ಟೇ ಅಲ್ಲದೇ ಮಂಗಳೂರು ಕುಕ್ಕರ್ ಬಾಂಬ್ ಆರೋಪಿ ನಮ್ಮ ಸೋದರ ಅಂತಾರೆ ಕಾಂಗ್ರೆಸ್‍ನವರು. ಹಾಗಾದ್ರೆ ಕಾಂಗ್ರೆಸ್‍ನವರು ಯಾರ ಪರ ಇದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.