ಡಿಕೆಶಿ ಕುಟುಂಬ ಬಂದಿಳಿದ ಹೆಲಿಕಾಪ್ಟರ್‌ ತಪಾಸಣೆ ವೇಳೆ ಮಾತಿನ ಚಕಮಕಿ…

73
firstsuddi

ಮಂಗಳೂರು: ಡಿಕೆಶಿ ಕುಟುಂಬ ಹೆಲಿಕಾಪ್ಟರ್ ನಲ್ಲಿ ಧರ್ಮಸ್ಥಳಕ್ಕೆ ಬಂದಿಳಿದ ವೇಳೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿಗಳು ಹಾಗೂ ಹೆಲಿಕಾಪ್ಟರ್ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಇಂದು ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆಂದು ಡಿಕೆಶಿ ಪತ್ನಿ ಉಷಾ, ಮಗಳು ಮತ್ತು ಅಳಿಯ ಹಾಗೂ ಮಗ ಒಂದು ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಹೆಲಿಪ್ಯಾಡಿನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಗ್ ಆಗುತ್ತಿದ್ದಂತೆ ಚುನಾವಣೆ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ. ಇದು ಖಾಸಗಿ ಹೆಲಿಕಾಪ್ಟರ್ ಆಗಿದ್ದು, ಇದನ್ನು ತಪಾಸಣೆ ಮಾಡಲು ಅವಕಾಶವಿಲ್ಲ ಎಂದು ಪೈಲೆಟ್ ರಾಮ್‌ದಾಸ್ ಹೇಳಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿ ಹಾಗೂ ಪೈಲಟ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೂ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಾರೆ.