ಮೋದಿ ಮೆಗಾ ರೋಡ್ ಶೋ- ಯಾವ ಸಮಯದಲ್ಲಿ ಎಲ್ಲಿ?

43
firstsuddi

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಮತದಾರರ ಮನಗೆಲ್ಲಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನ 12:30 ಗಂಟೆಯವರೆಗೆ 26.5 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ.

ಯಾವ ಸಮಯದಲ್ಲಿ ಎಲ್ಲಿ?
10:00 – ಶ್ರೀ ಸೋಮೇಶ್ವರ ಸಭಾ ಭವನ
10:10 – ಜೆಪಿ ನಗರ 5ನೇ ಹಂತ
10:20 – ಜಯನಗರ 5ನೇ ಬ್ಲಾಕ್
10:30 – ಜಯನಗರ 4ನೇ ಬ್ಲಾಕ್
10:40 – ಸೌತ್ ಎಂಡ್ ಸರ್ಕಲ್
10:45 – ಮಾಧವರಾವ್ ವೃತ್ತ
11:00 – ರಾಮಕೃಷ್ಣ ಆಶ್ರಮ
11:05 – ಉಮಾ ಥಿಯೇಟರ್ ಸಿಗ್ನಲ್
11:15 – ಮೈಸೂರು ಸಿಗ್ನಲ್
11:25 – ಟೋಲ್ ಗೇಟ್ ಸಿಗ್ನಲ್
11:35 – ಗೋವಿಂದರಾಜನಗರ
11:45 – ಮಾಗಡಿ ರೋಡ್ ಜಂಕ್ಷನ್
12:00 – ಶಂಕರ ಮಠ ಚೌಕ
12:20 – ಮಲ್ಲೇಶ್ವರಂ ವೃತ್ತ
12:30-18ನೇ ಅಡ್ಡ ರಸ್ತೆ ಜಂಕ್ಷನ್, ಸಂಪಿಗೆ ರಸ್ತೆ.