ರಸ್ತೆ ಬದಿ ಸೊಪ್ಪು ಮಾರುವ ವೃದ್ಧೆ ಮೇಲೆ ಮಚ್ಚಿನಿಂದ ಹಲ್ಲೆ…

74
firstsuddi

ಬೆಂಗಳೂರು: ರಸ್ತೆ ಬದಿ ಸೊಪ್ಪು ಮಾರುವ ವೃದ್ಧೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಜಯನಗರ 26ನೇ ಕ್ರಾಸ್ ನಲ್ಲಿರುವ ಬಾಲಾಜಿ ಮೆಡಿಕಲ್ ಬಳಿ ನಡೆದಿದೆ.

ವೃದ್ಧೆ ಚಂದ್ರಮ್ಮ ಫುಟ್ ಬಾತ್ ನಲ್ಲಿ ಕಳೆದ ಕೆಲ ವರ್ಷಗಳಿಂದ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದಾರೆ. ಅಂತೆಯೇ ಶನಿವಾರ ಸಂಜೆ ಕೂಡ ತಮ್ಮ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಚಂದ್ರಮ್ಮ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಚಂದ್ರಮ್ಮ ತಲೆಗೆ ತೀವ್ರ ಪೆಟ್ಟಾಗಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಘಟನೆ ಕುರಿತು ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.