ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ತಾಯಿಹಳ್ಳದಲ್ಲಿ ವೃದ್ಧೆಯ ಶವ ಪತ್ತೆ…

132
firstsuddi

ಚಿಕ್ಕಮಗಳೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಹೊಸಸಿದ್ರಳ್ಳಿ ಬಳಿಯ ತಾಯಿಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಶವ ಪತ್ತೆಯಾಗಿದೆ.

ವೃದ್ಧೆಯನ್ನು ಹೊಸ ಸಿದ್ರಳ್ಳಿ ಗ್ರಾಮದ ರಾಮಮ್ಮ(65)ಎಂದು ಗುರುತಿಸಲಾಗಿದೆ. ಮುಳುಗಡೆಯಾದ ಅಡಿಕೆ ತೋಟ ನೋಡಲು ತೆರಳಿದ್ದ ರಾಮಮ್ಮ ಕಾಲು ಜಾರಿ ತಾಯಿಹಳ್ಳಕ್ಕೆ ಬಿದ್ದಿದ್ದರು. ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ರಾಮಮ್ಮನ ಶವ ಇಂದು ಪತ್ತೆಯಾಗಿದೆ.

ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.