ವರಮಹಾಲಕ್ಷ್ಮಿ ಹಬ್ಬ: ಕಬ್ಬಾಳಮ್ಮ ದೇವಿಗೆ ನೋಟುಗಳ ಸಿಂಗಾರ…

64
firstsuddi

ರಾಮನಗರ: ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತವಾಗಿ ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕನಕಪುರದ ಕಬ್ಬಾಳಮ್ಮ ದೇವಿಗೆ ವಿವಿಧ ನೋಟುಗಳಿಂದ ಅಲಂಕಾರ ಮಾಡಿರುವುದು ವಿಶೇಷವಾಗಿದ್ದು, ಭಕ್ತರ ಗಮನ ಸೆಳೆಯಿತು.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿರುವ ಕಬ್ಬಾಳಮ್ಮ ದೇವಿಯನ್ನು ನೋಟಿನಿಂದ ಸಿಂಗಾರಗೊಳಿಸಲಾಗಿದೆ. ವಿವಿಧ ನೋಟುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದ್ದು, ದೇವಿ ಕಣ್ಮನ ಸೆಳೆದಿದ್ದಾಳೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಮನೆಗಳಲ್ಲಿಯೂ ಮಹಿಳೆಯರು ದೇವಿಯನ್ನು ವಿಭಿನ್ನವಾಗಿ ಅಲಂಕರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಅರಿಶಿಣ ಕುಂಕುಮ ಸೇರಿ ಬಾಗಿನವನ್ನು ವಿತರಣೆ ಮಾಡಲಾಗುತ್ತಿದೆ.