ಯಾವುದೇ ಪರವಾನಿಗೆ ಹೊಂದಿರದೆ ಅಕ್ರಮವಾಗಿ ಮರಳು ಸಾಗಾಟ- ಟಿಪ್ಪರ್ ವಶಕ್ಕೆ ಪಡೆದ ಪೊಲೀಸರು…

62
firstsuddi

ಉಡುಪಿ: ಯಾವುದೇ ಪರವಾನಿಗೆ ಹೊಂದಿರದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಮರಳು ಸಹಿತ ಹಿರಿಯಡ್ಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿರಿಯಡ್ಕ ಪಿಎಸ್ ಐ ಮಂಜುನಾಥ ಮರಬದ ಅವರು ರೌಂಡ್ಸ್ ಕರ್ತವ್ಯದಲ್ಲಿ ಉಡುಪಿ ತಾಲೂಕು ಕುಕ್ಕೆಹಳ್ಳಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಟಿಪ್ಪರ್ ಒಂದರಲ್ಲಿ ಯಾವುದೇ ರಾಜಧನ ಪಾವತಿಸದೆ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಟಿಪ್ಪರ್ ಹಾಗೂ ರೂ.6000 ಮೌಲ್ಯದ ಮರಳನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.