ಎಲ್​ಪಿಜಿ ಸಿಲಿಂಡರ್ ಸಬ್ಸಿಡಿ ಮೊತ್ತ 200 ರೂ.ನಿಂದ 300 ರೂ.ಗೆ ಹೆಚ್ಚಳ…

52
firstsuddi

ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುವ ಎಲ್‍ಪಿಜಿ ಸಿಲಿಂಡರ್ ಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಪ್ರಸ್ತುತ 200 ರೂಪಾಯಿ ಇದ್ದ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಿಸಲಾಗಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸಚಿವ ಅನುರಾಗ್ ಠಾಕೂರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಉಜ್ವಲ ಯೋಜನೆಯ ಅಡಿಯಲ್ಲಿ 14.2 ಕೆಜಿಯ ಗ್ಯಾಸ್ ಸಿಲಿಂಡರ್ ಪಡೆಯುವ ಬಡ ಮಹಿಳೆಯರು ಅದಕ್ಕಾಗಿ 703 ರೂಪಾಯಿ ಪಾವತಿ ಮಾಡುತ್ತಿದ್ದಾರೆ. ಇದರಲ್ಲಿ 200 ರೂಪಾಯಿ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಈಗ ಮತ್ತೆ 100 ರೂಪಾಯಿ ಕೇಂದ್ರ ಸಬ್ಸಿಡಿ ನೀಡಲಿರುವ ಕಾರಣ 603 ರೂಪಾಯಿಗೆ ಉಜ್ವಲ ಯೋಜನೆಯ ಸಿಲಿಂಡರ್ ಸಿಗಲಿದೆ. ಇನ್ನು ಮಾರುಕಟ್ಟೆಯಲ್ಲಿ ಗೃಹಬಳಕೆಯೆ ಸಿಲಿಂಡರ್ ಬೆಲೆ 903 ರೂಪಾಯಿಯೇ ಆಗಿದೆ.

ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ?
ಪ್ರತಿಯೊಂದು ಮನೆಗೂ ಎಲ್​ಪಿಜಿ ಸಂಪರ್ಕ ಕಲ್ಪಿಸಬೇಕೆಂಬ ಸರ್ಕಾರದ ಮಹದ್ಗುರಿ ಹಿನ್ನೆಲೆಯಲ್ಲಿ ಪಿಎಂ ಉಜ್ವಲ ಯೋಜನೆಯನ್ನು ರೂಪಿಸಲಾಗಿದೆ. 2016ರಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಉಚಿತ ಎಲ್​ಪಿಜಿ ಸಂಪರ್ಕ ಕಲ್ಪಿಸುವುದರೊಂದಿಗೆ ಯೋಜನೆ ಚಾಲನೆಗೊಂಡಿತು. 2021ರಲ್ಲಿ ಎರಡನೇ ಹಂತದ ಉಜ್ವಲ ಸ್ಕೀಮ್ ಅನ್ನು ಚಾಲನೆಗೆ ತರಲಾಯಿತು. ಕೆಲಸಕ್ಕೆಂದು ಬೇರೆ ರಾಜ್ಯಗಳಿಗೆ ವಲಸೆ ಹೋದ ಕುಟುಂಬದವರಿಗೂ ಕೂಡ ಯೋಜನೆ ಸಿಗುವಂತೆ ಮಾಡಲಾಗಿದೆ.