ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನ ಸೇರಿ 8 ಜನರ ರಕ್ಷಣೆ…

69
firstsuddi

ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನ ಸೇರಿದಂತೆ ಒಟ್ಟು 8 ಜನ ಪ್ರವಾಸಿಗರನ್ನು ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ಜಿಲ್ಲೆಯ ಗೋಕರ್ಣ ಮುಖ್ಯ ಕಡಲ ತೀರದಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಸದಸ್ಯರಾದ ಪರಶುರಾಮ(44), ರುಕ್ಮಿಣಿ(38), ಧೀರಜ್(14), ಅಕ್ಷರ(14), ಖುಷಿ(13), ದೀಪಿಕಾ(12) ನಂದ ಕಿಶೋರ(10) ಹಾಗೂ ಪಿಂಡ ಪ್ರಧಾನಕ್ಕೆ ಬಂದಿದ್ದ ಹುಬ್ಬಳ್ಳಿಯ ಎಲ್ ವಿ ಪಾಟೀಲ್ (30) ಅವರು ಸಮುದ್ರದಲ್ಲಿ ಮುಳುಗಡೆಯಾಗಿದ್ದರು. ಇದನ್ನು ನೋಡಿದ ಕೂಡಲೇ ಲೈಪ್ ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಾಂತ ಎಂಬುವವರು ಸಮುದ್ರಕ್ಕೀಳಿದು ರಕ್ಷಣೆ ಮಾಡಿದ್ದಾರೆ.

ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.