ಉಡುಪಿ: ಮಾಜಿ ರಾಜ್ಯಪಾಲ ಪಿ.ಬಿ ಆಚಾರ್ಯ(92) ಅವರು ನಿಧನರಾಗಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯವರಾಗಿರುವ ಪಿ.ಬಿ ಆಚಾರ್ಯ ಅವರು ಮಹಾರಾಷ್ಟ್ರದ ಮುಂಬೈಯಲ್ಲಿ ನಿಧನರಾಗಿದ್ದಾರೆ. ಇವರು ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶದಲ್ಲಿ ರಾಜ್ಯಪಾಲರಾಗಿದ್ದರು.
ಆಚಾರ್ಯರು ತೆಂಕಪೇಟೆಯ ಆಚಾರ್ಯ ಮಠದಲ್ಲಿ ಹುಟ್ಟಿ ಬೆಳೆದವರು. ಉಡುಪಿ ಎಂ ಜಿ ಎಂ ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಯಾಗಿದ್ದರು. ಶಿಕ್ಷಣದ ಬಳಿಕ ಉದ್ಯೋಗ ಅರಸಿ ಮುಂಬಯಿ ಮತ್ತಿತರ ಪ್ರದೇಶಕ್ಕೆ ತಿರುಗಾಟ, ಬಾಲ್ಯದಿಂದಲೇ ಸಂಘದ ಶಿಸ್ತಿನ ಸ್ವಯಂಸೇವಕ. ಬಳಿಕ ಪ್ರಚಾರಕ, ಈಶಾನ್ಯ ಭಾರತದಲ್ಲಿ ಕಾರ್ಯ ನಿರ್ವಹಣೆ, ಆ ಕಾಲದಲ್ಲೇ ಪ್ರಧಾನಿ ಮೋದಿಯವರ ಸಂಪರ್ಕ. ಪರಿಣಾಮವಾಗಿ ಮೋದಿಯವರು ಪ್ರಧಾನಿಯಾದ ಬಳಿಕ ನಾಗಾಲ್ಯಾಂಡ್ ನ ರಾಜ್ಯಪಾಲರನ್ನಾಗಿ ಆಚಾರ್ಯರನ್ನು ನಿಯುಕ್ತಿಗೊಳಿಸಿದರು. ಆ ಹೊತ್ತಲ್ಲೇ ಆಚಾರ್ಯರು ಅಸ್ಸಾಂ, ತ್ರಿಪುರಾ, ಅರುಣಾಚಲಪ್ರದೇಶ, ಸಿಕ್ಕಿಂ, ಮೇಘಾಲಯ ಮೊದಲಾದ ರಾಜ್ಯಗಳ ಹಂಗಾಮಿ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.










