ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ…

54
firstsuddi

ಬೆಂಗಳೂರು: 2023-24 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- 1ರ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಂಡಳಿಯಿಂದ ಪ್ರಕಟಿಸಿರುವ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 15ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

2024ರ ಮಾರ್ಚ್ 2 ರಿಂದ ಮಾರ್ಚ್ 22ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಇನ್ನು 2024ರ ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿದೆ.

ವೇಳಾಪಟ್ಟಿ ಇಂತಿದೆ:
ಎಸ್‍ಎಸ್‍ಎಲ್‍ಸಿ:
* ಮಾರ್ಚ್ 25- ಪ್ರಥಮ ಭಾಷೆ (ಕನ್ನಡ)
* ಮಾರ್ಚ್ 27- ಸಮಾಜ ವಿಜ್ಞಾನ
* ಮಾರ್ಚ್ 30- ವಿಜ್ಞಾನ
* ಏಪ್ರಿಲ್ 2- ಗಣಿತ
* ಏಪ್ರಿಲ್ 4- ತೃತೀಯ ಭಾಷೆ (ಹಿಂದಿ)
* ಏಪ್ರಿಲ್ 6- ದ್ವೀತಿಯ ಭಾಷೆ (ಇಂಗ್ಲಿಷ್).

ದ್ವಿತೀಯ ಪಿಯುಸಿ:
* ಮಾರ್ಚ್ 2- ಕನ್ನಡ, ಅರೇಬಿಕ್
* ಮಾರ್ಚ್ 4- ಇತಿಹಾಸ, ಭೌತಶಾಸ್ತ್ರ
* ಮಾರ್ಚ್ 5- ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್ ಕೇರ್
* ಮಾರ್ಚ್ 6- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
* ಮಾರ್ಚ್ 7- ಹಿಂದಿ
* ಮಾರ್ಚ್ 9- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
* ಮಾರ್ಚ್ 11- ಇಂಗ್ಲಿಷ್
* ಮಾರ್ಚ್ 12- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
* ಮಾರ್ಚ್ 13- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
* ಮಾರ್ಚ್ 14- ಗಣಿತ, ಶಿಕ್ಷಣಶಾಸ್ತ್ರ
* ಮಾರ್ಚ್ 16- ಭೂಗೋಳಶಾಸ್ತ್ರ, ಜೀವಶಾಸ್ತ್ರ
* ಮಾರ್ಚ್ 18- ರಸಾಯನಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ, ಹಿಂದೂಸ್ಥಾನಿ ಸಂಗೀತ
* ಮಾರ್ಚ್ 20- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
* ಮಾರ್ಚ್ 22- ಅರ್ಥಶಾಸ್ತ್ರ.