ಫೈಟರ್ ರವಿ ನಿವಾಸದ ಮೇಲೆ ಐಟಿ ದಾಳಿ…

55
firstsuddi

ಬೆಂಗಳೂರು: ರೌಡಿ ಶೀಟರ್ ಎಂಬ ಕಾರಣಕ್ಕಾಗಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ನಿವಾಸದ ಮೇಲೆ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವೈಯಾಲಿಕಾವಲ್ ನಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚು ಹಣ ಸಂಪಾದನೆ ಆರೋಪದ ಮೇಲೆ ದಾಳಿ ನಡೆಸಲಾಗಿದೆ.

ಫೈಟರ್ ರವಿ, ಅಪರಾಧ ಚಟುವಟಿಕೆಯಿಂದ ದೂರವಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ. ಕಳೆದ ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಲು ಫೈಟರ್ ರವಿ ಮುಂದಾಗಿದ್ದರು. ಆದರೆ ರೌಡಿಶೀಟರ್ ಹಿನ್ನೆಲೆ ಇದೆ ಎಂದು ವಿವಾದ ಆಗಿತ್ತು. ನಂತರ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ ನಿಂತು ಸ್ಪರ್ಧಿಸಿದ್ದರು.