ಕುಂದಾಪುರ: ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ನಿನ್ನೆ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ದೇಗುಲದ ವತಿಯಿಂದ ಕೆ.ಎಲ್.ರಾಹುಲ್ ಅವರನ್ನು ಗೌರವಿಸಲಾಯಿತು. ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್, ಅರ್ಚಕ ಸುರೇಶ್ ಭಟ್ ಇದ್ದರು.
ವಿಶ್ವಕಪ್ ಟೂರ್ನಿ ನಂತರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿ ಸರಣಿ ಗೆದ್ದುಕೊಟ್ಟಿದ್ದರು. ಅದಾದ ಬಳಿಕ ಈಗ ಆಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅಲಭ್ಯರಾಗಿದ್ದಾರೆ. ಸದ್ಯ ಕೆ.ಎಲ್.ರಾಹುಲ್ ವಿಶ್ರಾಂತಿಯಲ್ಲಿದ್ದಾರೆ.










