ಚಿಕ್ಕಮಗಳೂರು – ಸಣ್ಣ ಸಣ್ಣ ಸಮುದಾಯಗಳು ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಆ ವರ್ಗದ ಜನ ಸಂಘಟಿತರಾಗಿ ಒಗ್ಗೂಡಿಸಾಗಬೇಕು ಎಂದು ಶಾಸಕ ಎಚ್ ಡಿ ತಮ್ಮಯ್ಯ ಹೇಳಿದರು.
ರಾಜ್ಯ ಸರ್ಕಾರದ ಪ್ರತಿಷ್ಠಿತ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿಗೆ ಪಾತ್ರರಾದ ಜಿಲ್ಲೆಯ ಹಿರಿಯ ವಿಗ್ರಹ ಶಿಲ್ಪಿ ಜಯಣ್ಣಾಚಾರ್ ಅವರಿಗೆ ರಾಜ್ಯ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿ ನಗರದ ಲೋಟಸ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು
ವಿಶ್ವಕರ್ಮ ಸಮುದಾಯದ ಜನ ಅತ್ಯಂತ ಕ್ರಿಯಾಶೀಲರು ದೇವರ ವಿಗ್ರಹವನ್ನೇ ಕೆತ್ತಿ ನಿರ್ಮಿಸಿ ದೇವರು ಹೀಗಿದ್ದಾನೆ ಎಂದು ಜಗತ್ತಿಗೆ ತೋರಿಸುವವರು ವಿಶ್ವ ವಿಖ್ಯಾತ ಬೇಲೂರು ಹಳೇಬೀಡು ಸೇರಿದಂತೆ ಜಗತ್ತಿನ ಎಲ್ಲಾ ದೇವಾಲಯಗಳ ನಿರ್ಮಾಣದಲ್ಲೂ ವಿಶ್ವಕರ್ಮರ ಪಾತ್ರವಿದೆ ಎಂದರು
ವಿಶ್ವಕರ್ಮ ಸಮುದಾಯದವರು ಕುಲಕಸುಬಿನ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಿ ಒಗ್ಗೂಡಿ ಸಾಗಬೇಕು ಎಂದು ಕಿವಿ ಮಾತು ಹೇಳಿದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂಎಲ್ ಮೂರ್ತಿ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ವಿಗ್ರಹ ಶಿಲ್ಪಿ ಜಯಣ್ಣಾಚಾರ್ ಅವರು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿ ಸಂಚಾಲಕ ಜಗದೀಶಾಚಾರ್ ಜಯಣ್ಣಾಚಾರ್ ಅವರಿಗೆ ಪ್ರಶಸ್ತಿ ಬಂದಿರುವುದು ವಿಶ್ವಕರ್ಮ ಸಮುದಾಯದ ಕೀರ್ತಿಯನ್ನು ಹೆಚ್ಚಿಸಿದೆ ಅವರನ್ನು ಸನ್ಮಾನಿಸಿ ಅಭಿನಂದಿಸುತ್ತಿರುವುದು ತಮಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮಂಟೇಲಿಂಗಾಚಾರ್ ರಾಜ್ಯ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿಯ ಅಧ್ಯಕ್ಷ ಪುರುಷೋತ್ತಮಾಚಾರ್ ಅಭಿನಂದನಾ ನುಡಿಗಳನ್ನಾಡಿದರು
ವಿಗ್ರಹ ಶಿಲ್ಪಿ ಜಯಣ್ಣಾಚಾರ್ ಅವರನ್ನು ಕ್ರಿಯಾ ಸಮಿತಿಯಿಂದ
ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು ಇದೇ ವೇಳೆ ವಿವಿಧ ಸಂಘ-ಸಂಸ್ಥೆಗಳಿಂದ ಜಯಣ್ಣಾಚಾರ್ ಅವರನ್ನು ಗೌರವಿಸಲಾಯಿತು
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಗ್ರಹ ಶಿಲ್ಪಿ ಜಯಣ್ಣಾಚಾರ್ ರಾಜ್ಯ ಪ್ರಶಸ್ತಿಗಿಂತ ತಮ್ಮನ್ನು ತವರಿನಲ್ಲಿ ಸನ್ಮಾನಿಸುತ್ತಿರುವುದು ತಮಗೆ ಸಾರ್ಥಕತೆ ಮತ್ತು ಸಂತಸ ತಂದಿದೆ ಎಂದು ಹೇಳಿದರು
ವಿಶ್ವಕರ್ಮ ಸಮಾಜದ ಹಾಸನ ಜಿಲ್ಲಾಧ್ಯಕ್ಷ ಜಿ ಕುಮಾರ್ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿಯ ಕಾರ್ಯದರ್ಶಿ ಎಸ್ ಈ ಲೋಕೇಶ್ವರಾಚಾರ್ ಬೇಲೂರು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ನಾರಾಯಣಾಚಾರ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ವಿಶ್ವಕರ್ಮ ಸಮುದಾಯದವರು ಕುಲಕಸುಬಿನ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು: ಶಾಸಕ ಎಚ್. ಡಿ. ತಮ್ಮಯ್ಯ










