ಬೃಹತ್ ಬಂಡೆ ಬಿದ್ದು ಇಬ್ಬರು ಕಾರ್ಮಿಕರು ಸಾವು…

40
firstsuddi

ತುಮಕೂರು: ತಾಲೂಕಿನ ಕ್ಯಾತಸಂದ್ರ ಪ್ರದೇಶದಲ್ಲಿರುವ ಕ್ವಾರಿ ಕಮ್ ಸ್ಟೋನ್ ಕ್ರಷರ್ ಘಟಕದಲ್ಲಿ ನಿನ್ನೆ ಬಂಡೆ ಸ್ಫೋಟಿಸುವ ಸಂದರ್ಭದಲ್ಲಿ ಬೃಹತ್ ಬಂಡೆಯೊಂದು ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29) ಹಾಗೂ ಛತ್ತೀಸ್‌ಗಢ ಮೂಲದ ಮೋನು (24) ಎಂದು ಗುರುತಿಸಲಾಗಿದೆ. ಬಂಡೆ ಸ್ಫೋಟಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಬಂಡೆ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.