ಉದ್ಯಮಿ ಗಣೇಶ್ ಸೇಟ್ ಮನೆ ಮೇಲೆ ಐಟಿ ದಾಳಿ- 116 ಐಟಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ…

49
firstsuddi

ಹುಬ್ಬಳ್ಳಿ: ಉದ್ಯಮಿ ಹಾಗೂ ಬಂಗಾರದ ವ್ಯಾಪಾರಿ ಗಣೇಶ ಸೇಟ್ ಅವರ ಮನೆ, ಕಚೇರಿ, ಅಂಗಡಿ ಹಾಗೂ ಒಡೆತನದ ಹೋಟೆಲ್​ಗಳ‌ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 116 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಈಗಾಗಲೇ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಹುಬ್ಬಳ್ಳಿಯ ಅಶೋಕ ನಗರದ ನಿವಾಸ, ಆಭರಣ ಮಳಿಗೆ, ಅಮರಗೋಳದ ರೆಸಾರ್ಟ್, ಸೇರಿದಂತೆ ಇನ್ನಿತರ ಅವರ ಒಡೆತನದ ವ್ಯಾಪಾರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಐಟಿ ಅಧಿಕಾರಿಗಳು ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.

ಉದ್ಯಮಿ ಗಣೇಶ್ ಸೇಟ್ ಅವರು ಸ್ಟೇಶನ್ ರಸ್ತೆಯಲ್ಲಿ ಕೆಜಿಪಿ ಜ್ಯುವೆಲ್ಲರಿ, ಜವಳಿ ಉದ್ಯಮ ಮತ್ತು ಹೋಟೆಲ್ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳು ಸತತ 10 ಗಂಟೆಗಳಿಂದ ಶೋಧಕಾರ್ಯ ನಡೆಸುತ್ತಿದ್ದು, ಆಸ್ತಿಗೂ, ಮೌಲ್ಯಕ್ಕೂ ವ್ಯತ್ಯಾಸ ಹಾಗೂ ತೆರಿಗೆ ಆದಾಯದಲ್ಲಿನ ವ್ಯತ್ಯಾಸದ ಬಗ್ಗೆ ಲೆಕ್ಕ ಹಾಕುತ್ತಿದ್ದಾರೆ. ಉದ್ಯಮಿ ಗಣೇಶ್ ಸೇಟ್ ಮತ್ತು ಪುತ್ರ ಶ್ರೀಗಂಧ ಸೇಟ್ ಅವರ ವಿಚಾರಣೆ ನಡೆಸಿದ್ದಾರೆ.