ವಿವಾಹ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ…

42
firstsuddi

ಶಿವಮೊಗ್ಗ: ವಿವಾಹ ನಿಶ್ಚಯವಾಗಿದ್ದ ಯುವಕನ ವಯಸ್ಸಿನ ಅಂತರ ಹೆಚ್ಚಾದ ಹಿನ್ನೆಲೆ ನಿಶ್ಚಿತಾರ್ಥ ಆಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ರಾಮನಗರದಲ್ಲಿ ನಡೆದಿದೆ.

ಬಿ.ಬಿ.ಮುಸ್ಕಾನ್ (20) ಮೃತ ಯುವತಿ. ಮುಸ್ಕಾನ್ ಪ್ಯಾರ ಮೆಡಿಕಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಳು. ಇದೇ ವೇಳೆ ಆಕೆಗೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ವಿವಾಹ ನಿಶ್ಚಯವಾಗಿದ್ದ ಯುವಕನಿಗೆ ಮತ್ತು ಆಕೆಗೆ ವಯಸ್ಸಿನ ಅಂತರ ಹೆಚ್ಚಾದ ಹಿನ್ನೆಲೆ ಈ ಮದುವೆಗೆ ನಿರಾಕರಿಸಿದ್ದಳು. ಆದರೆ ಕುಟುಂಬಸ್ಥರ ಒತ್ತಾಯದಿಂದ ಈ ಮದುವೆಗೆ ಒಪ್ಪಿಕೊಂಡಿದ್ದಳು. ಮನೆಯವರ ಬಲವಂತಕ್ಕೆ ಮದುವೆಗೆ ಒಪ್ಪಿಕೊಂಡಿದ್ದವಳು ಈಗ ನೇಣಿಗೆ ಶರಣಾಗಿದ್ದಾಳೆ.

ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.