ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದು ಅಸಾಧ್ಯ: ಸಿದ್ದರಾಮಯ್ಯ.

55
firstsuddi

ಹಾವೇರಿ: ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದು ಅಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು, ಈ ಹೇಳಿಕೆ ಹಲವರ ಹುಬ್ಬೇರಿಸುವಂತೆ ಮಾಡಿದೆ.

ಭ್ರಷ್ಟಾಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರ ಇಲ್ಲ ಎಂದು ಯಾರು ಹೇಳಿದರು? ಭ್ರಷ್ಟಾಚಾರ ಮುಕ್ತವಾಗುವುದು ಅಸಾಧ್ಯ. ಎಲ್ಲದರಲ್ಲೂ ‘ಕಪ್ಪುಕುಳಗಳು’ ಇದ್ದೇ ಇರುತ್ತವೆ, ಆದರೆ ಅಂತಹದ್ದನ್ನು ಗುರ್ತಿಸಿ, ಶಿಕ್ಷಿಸಲಾಗುತ್ತದೆ.

ಇದೇ ವೇಳೆ ಅಮಿತ್ ಶಾ ಅವರ ದಲಿತರು ಹಾಗೂ ಹಿಂದುಳಿದವರು ಈ ದೇಶದ ಸಂಪತ್ತು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೇವಲ ಮುಸ್ಲಿಂ, ಕ್ರಿಶ್ಚಿಯನ್ನರು ಹಾಗೂ ದಲಿತರಷ್ಟೇ ಅಲ್ಲ 140 ಕೋಟಿ ಜನರೂ ಈ ದೇಶದ ಆಸ್ತಿಯೇ ಎಂದು ಹೇಳಿದರು.

ಬಳಿಕ ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.