ಬೆಂಗಳೂರು: ನಾವು ಗೆದ್ದು ಬಿಡ್ತೀವಿ ಅಂತಾ ಹೇಳುತ್ತಿಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಒಗ್ಗಟ್ಟು ತೋರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಜ್ಯಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಅವರು, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋದಕ್ಕಿಂತ ಒಗ್ಗಟ್ಟು ತೋರಿಸಬೇಕು. ಈ ಮೂಲಕ ಅಭ್ಯರ್ಥಿ ಹಾಕಿದ್ದೀವಿ. ನೋಡೋಣ ಗೆಲ್ತೀವಾ ಅಂತ ಎಂದು ತಿಳಿಸಿದರು. ಈ ವೇಳೆ ಶರಣು ಕುಂದಕೂರು ಹೆಸರು ಕೇಳುತ್ತಾ ಇದ್ದಂತೆ ಕೆಂಡಾಮಂಡಲರಾದರು.