ಸರ್ಕಾರ ಬಿಡುಗಡೆ ಮಾಡಿರುವ ಎಫ್‍ಎಸ್‍ಎಲ್ ವರದಿಯನ್ನ ನಾನು ನೋಡಿಯೇ ಇಲ್ಲ: ಪ್ರಿಯಾಂಕ್ ಖರ್ಗೆ.

52
firstsuddi

ಗದಗ: ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನ
ಬಂಧಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರ ಬಿಡುಗಡೆ ಮಾಡಿರುವ ವಿಧಿವಿಜ್ಞಾನ ಪ್ರಯೋಗಾಲಯ ವರದಿಯನ್ನ ನಾನು ನೋಡಿಯೇ ಇಲ್ಲ ಎಂದು ಜಾರಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ಸತ್ಯ. ಇದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ ಎಂದು ಗೃಹಸಚಿವ ಪರಮೇಶ್ವರ್ ನಿನ್ನೆ ತಿಳಿಸಿದ್ದಾರೆ. ಈ ಕುರಿತು ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ ಅವರು, ಮೂವರನ್ನು ಅರೆಸ್ಟ್ ಮಾಡಲಾಗಿದೆ, ಇಷ್ಟಕ್ಕೆ ಕೇಸ್ ಮುಗಿಯಲ್ಲ. ಇನ್ನೂ ಅವರ ಧ್ವನಿ ಹೋಲಿಕೆಯ ಬಗ್ಗೆ ಪರಿಶೀಲಿಸಬೇಕು. ಆ ಸಂದರ್ಭದಲ್ಲಿ ಅವರು ಅಲ್ಲಿದ್ರಾ ಅನ್ನೋದನ್ನ ದೃಢಪಡಿಸಬೇಕು. ನಂತರ ಮುಂದಿನ ತನಿಖೆಯಾಗುತ್ತದೆ ಎಂದು ತಿಳಿಸಿದ್ದಾರೆ.

ನನಗೆ ಸಿಕ್ಕ ಫೂಟೆಜ್ ಅನ್ನು ಖಾಸಗಿ ಫೋರೆನ್ಸಿಕ್‌ನಲ್ಲಿ ಪರಿಶೀಲಿಸಿದ್ದೆವು. ನಾನು ಸರ್ಕಾರದ ವರದಿ ಫೈನಲ್ ಅಂತ ಹೇಳಿದ್ದೆ. ಬಿಜೆಪಿಯವರು ಖಾಸಗಿ ವರದಿಯನ್ನ ಸರ್ಕಾರಿ ವರದಿಯಾಗಿ ಬಿಂಬಿಸುವುದು ತಪ್ಪು. ಈಗಲೂ ನಾನು ಅದನ್ನೇ ಹೇಳುತ್ತೇನೆ ಸರ್ಕಾರದ ವರದಿಯನ್ನ ನಾನು ನೋಡಿಯೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.