ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಗೆ ಪೊಲೀಸ್ ದಾಳಿ- ಮೂವರ ಬಂಧನ…

49
firstsuddi

ಮಂಗಳೂರು: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ ಓರ್ವ ಮಹಿಳೆಯನ್ನು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕು ಉಜಿರೆಯಲ್ಲಿ ನಡೆದಿದೆ.

ಬಂಧಿತರನ್ನು ತುಮಕೂರು ಅರಳೇಪೇಟೆ ನಿವಾಸಿ ರೇಣುಕಾ ಪ್ರಸಾದ್ (29), ಕಾರ್ಕಳ ನಿಟ್ಟೆ ನಿವಾಸಿ ರಾಜೇಶ್ ಮೋಹನ್ ನಾಯರ್ (34), ಮತ್ತು ನಿತೀನ್ ಕುಮಾರ್ (28) ಎಂದು ಗುರುತಿಸಲಾಗಿದೆ.

ನಿನ್ನೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಹಳೆಪೇಟೆ ಎಂಬಲ್ಲಿರುವ ಸುರೇಶ್ ಲಾಡ್ಜ್ , ಬೋರ್ಡಿಂಗ್ & ಲಾಡ್ಜಿಂಗ್/ ಐಶ್ವರ್ಯಾ ಲಾಡ್ಜ್ , ಬೋರ್ಡಿಂಗ್ & ಲಾಡ್ಜಿಂಗ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಬಿ.ಜಿ.ಸುಬ್ಬಾಪೂರ ಮಠ್, ಪೊಲೀಸ್ ನಿರೀಕ್ಷಕರು, ಬೆಳ್ತಂಗಡಿ ಪೊಲೀಸ್ ಠಾಣೆಯವರು ಠಾಣಾ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ವೇಶ್ಯಾವಾಟಿಕೆ ನಿರತರಾಗಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿದ್ದ ಪ್ರಕರಣದ ನೊಂದ ಮಹಿಳೆಯನ್ನು ಮಹಿಳಾ ಸಿಬ್ಬಂದಿಗಳ ಭದ್ರಿಕೆಗೆ ಕೊಟ್ಟು, ಸದ್ರಿ ಆರೋಪಿಗಳ ವಿರುದ್ದ ಹಾಗೂ ದಾಳಿಯ ವೇಳೆ ಪರಾರಿಯಾದ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.