ಪತಿ ಅಗಲಿಕೆಯಿಂದ ಮನನೊಂದು ಪತ್ನಿ, ಮಗಳು ಆತ್ಮಹತ್ಯೆ…

53
firstsuddi

ಮೈಸೂರು: ಪತಿ ಅಗಲಿಕೆಯಿಂದ ಮನನೊಂದ ಪತ್ನಿ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸರಗೂರು ತಾಲ್ಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಂಖಹಳ್ಳಿ ಗ್ರಾಮದ ರಾಜನಾಯಕನ ಪತ್ನಿ ಗೀತಾ(40), 15 ವರ್ಷದ ಮಗಳು ಮೃತರು. ಕಳೆದ ಕೆಲವು ದಿನಗಳ ಹಿಂದೆ ಗೀತಾ ಪತಿ ರಾಜನಾಯಕ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿಯ ಅಗಲಿಕೆಯ ನೋವಿನಿಂದ ಗೀತಾ ಹೊರ ಬಂದಿರಲಿಲ್ಲ. ತವರು ಮನೆಯವರು ಸಾಕಷ್ಟು ಆತ್ಮಸ್ಥೈರ್ಯ ತುಂಬಿದ್ದರು. ಆದರೂ ಪತಿಯ ಅಗಲಿಕೆಯಿಂದ ಬೇಸತ್ತಿದ್ದ ಗೀತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಸಾವಿನಲ್ಲಿ ಮಗಳು ಸಹ ಜೊತೆಯಾಗಿದ್ದಾರೆ.

ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.